ಉದಯವಾಹಿನಿ, ಪಾಟ್ನಾ,: -ಪತ್ರಕರ್ತನ ಮನೆಗೆ ಏಕಾಏಕಿ ನುಗ್ಗಿದ ಕೆಲ ದುಷ್ಕರ್ಮಿಗಳು ಬಂದೂಕಿನಿಂದ ಗುಂಡಿಕ್ಕಿ ಪತ್ರಕರ್ತನನ್ನು ಹತ್ಯೆ ಮಾಡಿದ ಭೀಕರ ಘಟನೆ ಸಂಭವಿಸಿದೆ. ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಗುಂಡಿಗೆ ಬಲಿಯಾದ ಪತ್ರಕರ್ತನನ್ನು ಬಿಮಲ್ ಯಾದವ್ ಎಂದು ಗುರುತಿಸಲಾಗಿದೆ.
ರಾಣಿಗಂಜ್‌ನಲ್ಲಿರುವ ಅವರ ಮನೆಗೆ ಹಠಾತ್ತನೆ ಆಗಮಿಸಿದ ನಾಲ್ವರು ಅಪರಿಚಿತರು ಬಿಮಲ್ ಯಾದವ್ ಮೇಲೆ ಗುಂಡು ಹಾರಿಸಿದ್ದಾರೆ. ಎದೆಯಿಂದ ಗುಂಡುಗಳು ತಾಕಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೋಲಾಹಲ ಉಂಟಾಯಿತು. ಮರಣೋತ್ತರ ಪರೀಕ್ಷೆ ವೇಳೆ ತೀವ್ರ ಉದ್ವಿಗ್ನತೆ ಉಂಟಾಗಿತ್ತು. ಮಾಹಿತಿ ಪಡೆದ ಎಸ್ಪಿ ಹಾಗೂ ಸಂಸದರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
