
ಉದಯವಾಹಿನಿ ಮುದಗಲ್ಲ : ಲಿಂಗಸುಗೂರು ತಾಲೂಕಿನ ಮುದಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಅಲೆಮಾರಿ ಸುಡುಗಾಡು ಸಿದ್ಧ, ಮತ್ತು ಬುಡ ಜಂಗಮ ಮತ್ತು ಕೊರುವರು,ಮತ್ತು ಮೆದರು, ಚನ್ನದಾಸರು,ಸಮುದಾಯ ಗಳ ನಿವೇಶನ ರಹಿತ 105 ಕುಟುಂಬಗಳಿಗೆ ಸರಕಾರಿ ಜಮೀನನ್ನು ಆದ ಮುದಗಲ್ಲ ಸೀಮಾತಂತ ಸರ್ವೆ ನಂ : 593 /ರ ಒಟ್ಟು 65 ಎಕರೆ 31 ಗುಂಟೆ ಪೈಕಿ 6 ಎಕರೆ ಜಮೀನನ್ನು ಈ SC ಅಲೆಮಾರಿ ಸುಡುಗಾಡು ಸಿದ್ದ ಮತ್ತು ಜಂಗಮ ಕೊರುವರು ,ಮೆದರು,ಚನ್ನದಾಸರು ಸಮೂದಾಯ ಗಳಿಗೆ 105 ನಿವೇಶನ ರಹಿತ ಕುಟುಂಬ ಗಳಿಗೆ ನಿವೇಶನ ಮತ್ತು ಹಕ್ಕು ಪತ್ರಕಾಗಿ ಮಂಜೂರಾತಿ ಮಾಡಬೇಕು ಎಂದು ನಾಡ ಕಾಯಾ೯ಲಯ ಮುದಗಲ್ಲ ಉಪ ತಹಶೀಲ್ದಾರ್ ತುಲುಜಾ ರಾಮ ಸಿಂಗ್ ಹಾಗೂ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅವರಿಗೆ ಕನಾ೯ಟಕ ಅಲೆಮಾರಿ ,ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಒಕ್ಕೂಟ ದಿಂದ ಮನವಿ ಪತ್ರ ಸಲ್ಲಿಸಲಾಯಿತು..ಮುದಗಲ್ಲ, ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂ: 21 ರಲ್ಲಿ ಶಾಧಿ ಮಹಲ್ ಹತ್ತಿರ ಮೇಗಳಪೇಟೆ ಹತ್ತಿರ APMC ಹತ್ತಿರ, ಪೆಟ್ರೋಲ್ ಪಂಕ್ ಹತ್ತಿರ ಮುದಗಲ್ಲನಲ್ಲಿ ವಾಸಿಸುವ (SC) ಅಲೆಮಾರಿ ಸುಡುಗಾಡು ಸಿದ್ಧ ಮತ್ತು ಬುಡಜಂಗಮ, ಕೊರುವರು,ಮೆದರು, ಚನ್ನದಾಸರು, ಸಮುದಾಯದವರು 65 ವರ್ಷಗಳಿಂದ ನಿವೇಶನ ಮತ್ತು ವಸತಿ ಇಲ್ಲದೆ ಇತರೆ ಮೂಲಭೂತ ಸೌಲಭ್ಯ ಗಳಿಲ್ಲದೆ, ನಾವು ಟೆಂಟು ಗುಡಾರ, ಬಟ್ಟೆ ಜೊಪಡಿ ಮಳೆ, ಗಾಳಿ, ಸಿಡಿಲು, ಬಿಸಿಲು ವಿಷಾ ಜಂತುಗಳಿಂದ ಬಯಬಿತರಾಗಿ ಊರಿನ ಆಚೆ, ಜೊಪಡಿ ಮೊರಿ, ಕೆರಿಯಲ್ಲಿ ಎಲ್ಲಾ ಸಮೂದಾ ಯಗಳಿಂಗಿತ ಕಟ್ಟ ಕಡೆಯ ಅಸ್ಪೃಶ್ಯರಿಗಿಂತ ಕೀಳು ಯಿರಿಮೆಯಾಗಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ.ಅದಕ್ಕಾಗಿ ಈ ಸಮುದಾಯ ಗಳ ಮೂಲ ಸೌಲಭ್ಯಗಳನ್ನು ಪಡೆದು ನಾಗರೀಕರಾಗಿಬದುಕಲು ಲಿಂಗಸುಗೂರು ತಾಲೂಕಿನ ಮುದಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಅಲೆಮಾರಿ ಸುಡುಗಾಡು ಸಿದ್ಧ, ಮತ್ತು ಬುಡ ಜಂಗಮ ಮತ್ತು ಕೊರುವರು,ಮತ್ತು ಮೆದರು, ಚನ್ನದಾಸರು,ಸಮುದಾಯ ಗಳ ನಿವೇಶನ ರಹಿತ 105 ಕುಟುಂಬಗಳಿಗೆ ಸರಕಾರಿ ಜಮೀನನ್ನು ಆದ ಮುದಗಲ್ಲ ಸೀಮಾತಂತ ಸರ್ವೆ ನಂ : 593 /ರ ಒಟ್ಟು 65 ಎಕರೆ 31 ಗುಂಟೆ ಪೈಕಿ 6 ಎಕರೆ ಜಮೀನನ್ನು ಈ SC ಅಲೆಮಾರಿ ಸುಡುಗಾಡು ಸಿದ್ದ ಮತ್ತು ಜಂಗಮ ಕೊರುವರು ,ಮೆದರು,ಚನ್ನದಾಸರು ಸಮೂದಾಯ ಗಳಿಗೆ 105 ನಿವೇಶನ ರಹಿತ ಕುಟುಂಬ ಗಳಿಗೆ ನಿವೇಶನ ಮತ್ತು ಹಕ್ಕು ಪತ್ರಕಾಗಿ ಮಂಜೂರಾತಿ ಮಾಡಬೇಕು
ಹಾಗೂ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ದೊರಕಿಸಿ ಕೊಡಲು ಎಲ್ಲ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಅನಿಲ್ ಕುಮಾರ್ DSS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಸೂರು ಅವರು ಹಾಗೂ ಬಸವರಾಜ ಬಂಕದಮನಿ DSS ಮುದಗಲ್ಲ ಘಟಕ ಅವರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವಾಗ ಮನವರಿಕೆ ಮಾಡಿದರು.ಈ ಸಂದರ್ಭದಲ್ಲಿ ಅನಿಲ್ ಕುಮಾರ್ ,ಬಸವರಾಜ ಬಂಕದಮನಿ,ಮೋಹನ್ ಬಂಡಾರಿ,ರವಿ ಕಟ್ಟಿಮನಿ, ರಾಮಚಂದ್ರಪ್ಪ ಮೊತಿ,ಅಕಾಶ ಮ್ಯಾದರ್ ,ಹನುಮಂತ, ಸುರೇಶ್, ಇತರರು ಉಪಸ್ಥಿತರಿದ್ದರು..
