
ಉದಯವಾಹಿನಿ ಕುಶಾಲನಗರ: ಮಾದವ ಗಾಡ್ಗೀಳ್ ಸಮಿತಿಯ ವರದಿ ಮತ್ತು ಕಸ್ತೂರಿ ರಂಗನ್ ವರದಿಯು ಮಲೆನಾಡು ಮತ್ತು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಾಸ ಮಾಡುವರೈತರು, ಅರಣ್ಯ ವಾಸಿ ಹಾಗೂ ಪರಿಸರಕ್ಕೆ ಮಾರಕವಾಗಿದೆ. ವರದಿಯ ಆಧಾರದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಕುಂದು ಉಂಟಾಗುವ ಸಾಧ್ಯತೆ ಹೆಚ್ಚಿದೆ. ರೈತಾಪಿ ವರ್ಗದ ಸಂಘಟಿತ ಹೋರಾಟದಿಂದ ಮಾತ್ರ ವರದಿ ಅನುಷ್ಠಾನಕ್ಕೆ ತಡೆಯೊಡ್ಡ ಬಹುದು ಎಂದು ರೈತ ಪ್ರಮುಖರು ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಂಡರು.ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕಸ್ತೂರಿ ರಂಗನ್ ವರದಿ ಸಾಧಕ ಬಾಧಕಗಳ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಸ್ತೂರಿ ರಂಗನ್ ವರದಿಯು ಜನ ಪರಿಸರ ವಿರೋಧಿ ನೀತಿಯಾಗಿದೆ. ವರದಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಲು ಅಸಾಧ್ಯ. ಕಸ್ತೂರಿ ರಂಗನ್ ಅವರು ಒಂದು ವಿಜ್ಞಾನಿ ಅವರು ತಮ್ಮ ಕಚೇರಿಯಲ್ಲಿ ಕುಳಿತು ಸ್ಯಾಟಲೈಟ್ ಮೂಲಕ ಭೂ ಪ್ರದೇಶಗಳ ಸರ್ವೆ ಮಾಡಿ ವರದಿಯನ್ನು ಸಿದ್ಧಪಡಿಸಿರುತ್ತಾರೆ.ರೈತರನ್ನು, ಮೂಲನಿವಾಸಿಗಳನ್ನು, ಆದಿವಾಸಿಗಳನ್ನು ನಿರ್ಲಕ್ಷ ಮಾಡಿ ವರದಿ ತಯಾರಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಜನಜೀವನ ಅಸ್ತವ್ಯಸ್ತವಾಗುವುದು ಅಲ್ಲದೆ, ಬದುಕಿನ ಹಕ್ಕು ಕಿತ್ತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಭೂ ಸುಧಾರಣಾ ಕಾಯ್ದೆಯನ್ನು ಸರ್ಕಾರ ತಿದ್ದುಪಡಿ ಮಾಡಿದ
ಹಿನ್ನೆಲೆಯಲ್ಲಿ ಹೊರ ರಾಜ್ಯದ ಯಾವುದೇ ಸಿರಿವಂತ ವ್ಯಕ್ತಿಗಳು ಕೃಷಿ ಭೂಮಿಯನ್ನು ಖರೀದಿಸಿ ಕೃಷಿಗೆ ಆದ್ಯತೆ ನೀಡದೆ ಇತರ ವ್ಯವಸ್ಥೆಗಳಿಗೆ ಅಣಿಯಾಗಿರುವ ಕಾರಣ ಪಶ್ಚಿಮ ಘಟ್ಟಗಳ ಪರಿಸರಗಳು ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜನಸಾಮಾನ್ಯರಿಗೆ ಮಾರಕ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ವಿಚಾರ ಮಂಡನೆೆ ಮಾಡಿದ ಪರಿಸರವಾದಿ ಮತ್ತು ಜನಪರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಗಡೆ ಮಾತನಾಡಿ, ಮಾದವ್ ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿಗಳು ಪರಿಸರಕ್ಕೆ ಹಾಗೂ ಜನಸಾಮಾನ್ಯರಿಗೆ ಮಾರಕವಾಗಿದೆ. ಪರಿಸರದೊಂದಿಗೆ ಬಿಡಿಸಲಾರದ ಸಂಬ0ಧ ಜನಸಾಮಾನ್ಯನು ಹೊಂದಿದ್ದಾನೆ. ಬಹುರಾಷ್ಟಿಯ ಕಂಪನಿಗಳಿಂದ ಎನ್.ಜಿ.ಓ.ಗಳಿಗೆ ನೇರವಾಗಿ ಹಣ ವರ್ಗಾವಣೆ ಹೊಂದುತ್ತದೆ. ಎನ್.ಜಿ.ಓ.ಗಳು ನೀಡುವ ವರದಿಯ ಅನ್ವಯ ಕಾರ್ಯಕ್ರಮಗಳು ರೂಪಿತವಾಗುತ್ತಿದೆ ಎಂದು ಆರೋಪಿಸಿದರು. ಕಸ್ತೂರಿ ರಂಗನ್ ವರದಿಯನ್ನು ಪಡೆಯಲು ಹಲವು ಬಾರಿ ಪ್ರಯತ್ನ ಮಾಡಲಾಗಿತ್ತು. ಕೇರಳ ಮೂಲದ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವರದಿಯನ್ನು ಪಡೆಯಲಾಯಿತು. ಗ್ರಾಮಗಳಲ್ಲಿ, ಮಲೆನಾಡು ಪ್ರದೇಶದಲ್ಲಿ ವಾಸ ಮಾಡುವ ಗ್ರಾಮವಾಸಿಗಳು ಮತ್ತು ರೈತರ ಬಳಿ ವಿಷಯ ಕುರಿತು ಪ್ರಸ್ತಾವನೆ ಮಾಡದೆ ವರದಿಯನ್ನು ಸಿದ್ಧಪಡಿಸ ಲಾಗಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯದ ಯಾವುದೇ ಶಾಸಕರಾಗಲಿ ಸಂಸದರಾಗಲಿ ಚಕಾರ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿ ಅನುಷ್ಠಾನವಾದಲ್ಲಿ ರೈತಾಪಿ ಜನರು ತಮ್ಮ ಹೊಲ, ಮನೆ, ತೋಟ ಬಿಟ್ಟು ಬೀದಿಗೆ ಬೀಳುವುದು ಶತಸಿದ್ಧ ಎಂದು ಆತಂಕ ವ್ಯಕ್ತಪಡಿಸಿದರು. ಪರಿಸರ ಇಂದು ಕೈಕೊಟ್ಟಿದೆ. ಮಳೆಯನ್ನು ಅವಲಂಬಿಸಿಕೊಂಡು ಕೃಷಿಕರು ಬೆಳೆಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಕಾರಣ ಜಾಗತಿಕ ತಾಪಮಾನವಾಗಿದೆ. ಜಾಗತಿಕ ತಾಪಮಾನಕ್ಕೆ ಪಶ್ಚಿಮಘಟ್ಟಗಳಲ್ಲಿ ಪರಿಸರ ನಾಶವಾಗುವುದು ಎಂದು ತಿಳಿದಿರುವುದು ತಪ್ಪು ಭಾವನೆ. ಆದರೆ ಸಮುದ್ರದಲ್ಲಿರುವ ಏರಿಳಿತಗಳಿಂದ ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡಗು ಜಿಲ್ಲೆಯ ಗ್ರಾಮೀಣ ಭಾಗದರೈತರು, ಕಾರ್ಮಿಕರು, ಬೆಳೆಗಾರರು ಕಾಡು ಪ್ರಾಣಿಗಳ ಹಾವಳಿ ನಡುವೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಕೊಡಗಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ. ಸಣ್ಣ ಪ್ರಮಾಣದ ಭೂಮಿಗಳನ್ನ ಹೊಂದಿ ಕೃಷಿ ಮಾಡಿ ಜೀವನ ನಡೆಸುವ ರೈತರ ಮೇಲೆ ಅವಜ್ಞಾನಿಕ ನೀತಿಗಳನ್ನು ತಂದು 55 ಗ್ರಾಮಗಳನ್ನು ಬಫರ್ ಜೂನ್ ಪಟ್ಟಿಗೆ ಸೇರಿಸಲಾಗಿದ್ದು ಇದನ್ನ ಕೈಬಿಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ತಾಲೂಕಿನ ರೈತರು ಕಾರ್ಮಿಕರು ಸಾರ್ವಜನಿಕರು ಕಸ್ತೂರಿರಂಗನ್, ಬಫರ್ ಜುನ್ ವರದಿಗಳ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಗಿದೆ. ರೈತರು, ಕಾರ್ಮಿಕರು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು
ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ.ಜಿಲ್ಲೆಗೆ ಯಾವುದೇ ಯೋಜನೆಗಳನ್ನು ತರುವ ಮುನ್ನ ಸ್ಥಳೀಯರೊಂದಿಗೆ ಚರ್ಚಿಸಬೇಕಾಗಿದ್ದರು.
ಏಕಾಏಕಿ ಕಾಯ್ದೆಗಳನ್ನ ಜಾರಿಗೆ ತಂದುರೈತರ ಮೇಲೆ ಏರಲು ಮುಂದಾಗಿರುವುದು ಸರಿಯಾದ ಕ್ರಮವಲ್ಲಸಾಧಕ ಬಾದಕಗಳ ಕುರಿತು ಚರ್ಚಿಸಲಾಗಿದ್ದು ಜಿಲ್ಲೆಯ ಜನರನ್ನ ಒಗ್ಗೂಡಿಸಿ ಜನರ ಹಿತದೃಷ್ಟಿಯಿಂದ ಬೃಹತ್ ಹೋರಾಟರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್, ಹೊಸಕೋಟೆ ಬಸವರಾಜು, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ,ಸಿದ್ದಾಪುರ ವಲಯ ಅಧ್ಯಕ್ಷ ಸುಜಯ್ ಬೋಪಯ್ಯ,ಸಬೀತ ಬೀಮಯ್ಯಸೇರಿದಂತೆ ಬೆಳೆಗಾರರು,ರೈತಸಂಘದ ಸದಸ್ಯರು,ಮುಖಂಡರು, ಸಾರ್ವಜನಿಕರು, ಸಂಘಸಂಸ್ಥೆ ಗಳು,ಎಲ್ಲಾ ರಾಜಕೀಯ ಮುಖಂಡರು ಈ ವಿಚಾರಘೋಷ್ಠಿಯಲ್ಲಿ ಭಾಗವಹಿಸಿದ್ದರು.
