
ಉದಯವಾಹಿನಿ ದೇವರಹಿಪ್ಪರಗಿ: ರಾಜ್ಯಾದ್ಯಂತ ಮುಂಗಾರು ಮಳೆ ವಿಳಂಬವಾಗಿದ್ದು, ಜನರ ಗೋಳಾಟ ಹೇಳತೀರದಾಗಿದೆ. ಒಂದೆಡೆ ರೈತರು ಬಿತ್ತನೆ ಮಾಡದೇ ಮಳೆಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಪರದಾಡುವಂತಾಗಿದೆ ಎಂದು ಗ್ರಾಮ ಪಂಚಾಯಿತಿಯ ಮುಂದೆ ಕೊಡ ತೆಗೆದುಕೊಂಡು ಪ್ರತಿಭಟನೆ ನಡೆಸಿದ ಮಹಿಳೆಯರು.ತಾಲೂಕಿನ ಮುಳಸಾವಳಗಿ ಗ್ರಾಮ ಪಂಚಾಯತ್ ಕಚೇರಿ ಮುಂದೆ ಈ ಹೈಡ್ರಾಮಾ ನಡೆದಿದೆ.ಗ್ರಾಮದ ಪ್ರಮುಖರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಕಚೇರಿಗೆ ಬಂದು ನೀರು ಯಾಕೆ ಪೂರೈಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ನಂತರ ಗ್ರಾಮಕ್ಕೆ ಗ್ರಾಪಂ ಅಧ್ಯಕ್ಷೆ ಹಾಗೂ ತಾ ಪಂ ಇಒ ಸುನೀಲ ಮದ್ದಿನ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ನೀರಿನ ಪೈಪಿನ ದುರಸ್ತಿ ಕಾರ್ಯಕ್ಕೆ ಸೂಚಿಸಿ ಸಂಜೆ ಅಥವಾ ನಾಳೆ ನೀರು ಬರಲಿದೆ ಎಂದು ತಿಳಿಸಿದರು. ನಂತರ ಪಿಡಿಒ ಮಹೇಶ ಬಗಲಿ ಅವರು ವೈದ್ಯಕೀಯ ರಜೆಯ ಮೇಲೆ ಹೋದ ಕಾರಣ ಅವರ ಜಾಗಕ್ಕೆ ಸಾತಿಹಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜೆ ಎಸ್ ಕನ್ನೋಳ್ಳಿ ಅವರನ್ನು ಹೆಚ್ಚುವರಿ ಯಾಗಿ ಕರ್ತವ್ಯ ನಿರ್ವಹಿಸಲು ನಿಯೋಜನೆಗೊಳಿಸಲಾಗಿದೆ ಎಂದು ತಾಪಂ ಇಒ ಸುನೀಲ ಮದ್ದಿನ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪ್ರತಿನಿಧಿಯಾದ ಗುರುರಾಜ ಆಕಳವಾಡಿ, ಗ್ರಾಮದ ಪ್ರಮುಖರಾದ ಸಾಬು ಶಂಕ್ರಪ್ಪ ಸೊನ್ನಳ್ಳಿ, ಬಸವರಾಜ ಕಲ್ಲೂರ, ರಾಮ ನಾಯ್ಕೋಡಿ, ಭೀಮ ಹಳ್ಳಿ, ಶರಣು ದಳವಾಯಿ, ಸಿದ್ದು ನಾಯ್ಕೋಡಿ, ಭೀಮ್ ನಾಟಿಕಾರ, ರಜಾಕ್ ಮೊಕಾಶಿ, ಶರಣು ಬಿಜಾಪುರ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಪ್ರಮುಖರು ಗಣ್ಯರು ಹಾಗೂ ಮಹಿಳೆಯರ ಭಾಗವಹಿಸಿದ್ದರು.
