
ಉದಯವಾಹಿನಿ ಚಿಂಚೋಳಿ: ಮನೆಗಳಿಗೆ ಅವಶ್ಯಕತೆಗೆ ಬೇಕಾಗುವ ವಿದ್ಯುತ್ ಯಂತ್ರಗಳಾದ ಮಿಕ್ಸರ್,ಗ್ಲ್ಯಾಂಡರ್ ಬಂದ ಮೇಲೆ ಬಿಸಕಲ್ಲು,ಒರಳು ಕಲ್ಲು,ಕಲಿಕಲ್ಲು,ಕಟಿಯುವರ ಬದುಕು ಬಲುಭಾರವಾಗಿದ್ದು ಆಧುನಿಕತೆಯ ಭರಾಟೆಯ ವ್ಯಾಪಾರ ಕಣ್ಮರೆಯಾಗಿದೆ.ಪಟ್ಟಣದ ತಾಲ್ಲೂಕಾ ಆಡಳಿತ ಸೌಧ ಮುಂಭಾಗದ ಮರದ ಕೆಳಗೆ ಕಲ್ಲು ಕಟಿಯುವ ಪರಿವಾರವು ಬಿಸಕಲ್ಲು,ಒರಳುಕಲ್ಲು ಕಲಿಕಲ್ಲು ಕಟಿಯುತ್ತಾ ತಮ್ಮ ಜೀವನ ಸಾಧಿಸು ಕುಲಕಸುಬು ಮುಂದುವರೆದಿಸಿದ್ದಾರೆ.ರೈತರ ಜಮೀನುಗಳಿಂದ ಕಪ್ಪು ಕಲ್ಲುಗಳು ತಂದು ಆ ಕಲ್ಲುಗಳಿಗೆ ಕಟಿದು ಬಿಸಕಲ್ಲು,ಒರಳುಕಲ್ಲು,ಕಲಿಕಲ್ಲು ಕಟಿದು ಪಟ್ಟಣ ಸೇರಿದಂತೆ ಪೋಲಕಪಳ್ಳಿ,ದೇಗಲಮಡಿ,ಅಣವಾರ,ಐನೋಳ್ ಳಿ,ಕಲ್ಲೂರ,ಚಿಮ್ಮಾನಚೋಡ,ಹೂಡದಳಿ,ಗಾ ರಂಪಳ್ಳಿ,ಎಂಪಳ್ಳಿ,ನೀಮಾಹೋಸಳ್ಳಿ,ತಾ ದಲಾಪೂರ,ಕನಕಪುರ,ಮೋತಕಪಳ್ಳಿ ಹೀಗೆ ಅನೇಕ ಗ್ರಾಮಗಳಿಗೆ ತೆರಳಿ ಒರಳುಕಲ್ಲು 1200ರೂಪಾಯಿ,ಕಲಿಕಲ್ಲು 500ರೂಪಾಯಿ,ಬಿಸಕಲ್ಲು 1500ರೂಪಾಯಿಗೆ ಮಾರಾಟ ಮಾಡುತ್ತೇವೆ.
ಆದರೆ ಈಗಿನ ಕಾಲದಲ್ಲಿ ವಿದ್ಯುತ್ ಯಂತ್ರಗಳು ಮಿಕ್ಸರ್,ಗ್ಲ್ಯಾಂಡರ್ ಗಳು ಬಂದ ಮೇಲೆ ಆಧುನಿಕ ಕಲ್ಲಿನ ವ್ಯಾಪಾರ ವಹಿವಾಟು ಕುಂಠಿತವಾಗಿದೆ ಇದಕ್ಕೆ ಯಾರು ಕೇಳುತ್ತಿಲ್ಲಾ 100ಕ್ಕೆ 20ಪ್ರತಿಶತಃ ಮಾತ್ರ ಬೇಡಿಕೆವಿದ್ದು ಇದರಿಂದ ಕಲ್ಲು ಕಟಿಯವರ ಜೀವನ ನರಕವಾಗಿದೆ ಕುಲಕಸುಬು ಬಿಡಬಾರದು ಎಂಬ ಕಾರಣಕ್ಕೆ ದಿನಕ್ಕೆ 300ರಿಂದ 350ರೂಪಾಯಿ ಆದಿಯ ಬರುತ್ತದೆ ಇದರಿಂದ ಊಟ ಬಟ್ಟೆ ಜೀವನಕ್ಕೆ ಸರಿಸಮವಾಗುತ್ತದೆ ಎಂದು ಕಲ್ಲು ಕುಟಿಗ ಯಲ್ಲಪ್ಪ ನಾಗಪ್ಪ ಚಂದಾಪೂರ ಹೇಳುತ್ತಾರೆ.ಮುಂಚೆ ಜನರು ಒರಳುಕಲ್ಲು,ಬಿಸಕಲ್ಲು ಸಾಕಷ್ಟು ಜನರು ಬೇಡಿಕೆಯಂತೆ ಬಳಸುತ್ತಿದ್ದರು,ಈಗ ಯಾರು ಖರೀದಿಸುತ್ತಿಲ್ಲಾ ಇದರಿಂದ ಬಿಸಕಲ್ಲು, ಒರಳುಕಲ್ಲು ಯಾರು ಕೇಳುತ್ತಿಲ್ಲಾ ನಮ್ಮ ಕುಲಕಸುಬು ಇದರಿಂದ ಹಗಲಿರುಳು ದುಡಿದು ಬಹಳಷ್ಟು ಶ್ರಮಪಡುತ್ತೇವೆ ಆದರೆ ಇದರಿಂದ ತಿಂಗಳಿಂದ ಆದಾಯ ಬರುವುದು ಕೇವಲ 10ಸಾವಿರ ಮಾತ್ರ ಇದರಲ್ಲಿಯೇ ಹೊಟ್ಟೆ ಬಟ್ಟೆ ಮಕ್ಕಳ ವಿಧ್ಯಾಭ್ಯಾಸ ಜೋತೆಗೆ ಮನೆಯ ಇನ್ನಿತರ ಜವಾಬ್ದಾರಿಗಳು ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಕಲ್ಲು ಕುಟಿಗ ಹೇಳುತ್ತಾನೆ.
ಜಮೀನುಗಳಿಂದ ಕಪ್ಪುಕಲ್ಲು ತಂದು ಒರಳುಕಲ್ಲು,ಬಿಸಕಲ್ಲು,ಕಲಿಕಲ್ಲು ಕಟಿದು ಹಗಲಿರುಳು ಮನೆಮಂದಿ ಸೇರಿಕೊಂಡು ಶ್ರಮಿಸಿದರು ಸಹ ತಿಂಗಳಿಗೆ 10ಸಾವಿರ ಗಳಿಕೆ ಆಗುತ್ತದೆ ಇದರಿಂದ ಊಟ ಬಟ್ಟೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಸರಿಹೋಗುವುದಿಲ್ಲಾ ಮತ್ತೆ ಸಾಲಸೂಲ ಮಾಡಿ ಜೀವನ ಸಾಧಿಸುತ್ತಿದ್ದೇವೆ ನಮ್ಮ ಕುಲಕಸುಬು ಬಿಡಬಾರದು ಎಂಬ ಉದ್ದೇಶದಿಂದ ಶ್ರಮಿಸುತ್ತಿದ್ದೇವೆ.
ರಾಜ್ಯ ಸರ್ಕಾರವು ಕಲ್ಲು ಕಟಿಯವರಿಗೆ ವಿಶೇಷ ಯೋಜನೆಗಳು ರೂಪಿಸಿ ಸಬ್ಸಿಡಿ ರೂಪದಲ್ಲಿ ನೆರವು ನೀಡಬೇಕು.:- ಯಲ್ಲಪ್ಪ ನಾಗಪ್ಪ ಕಲ್ಲು ಕುಟಿಗ ಚಂದಾಪೂರ.
