
ಉದಯವಾಹಿನಿ ಸಿಂಧನೂರು: ತಾಲ್ಲೂಕಿನ ಬರುವ ಎಲ್ಲ ಗ್ರಾಮಗಳಲ್ಲಿ ಇರುವ ಜನರು ಸಮಸ್ಯೆಗಳನ್ನು ಕಾನೂನಾತ್ಮಕ ಅತೀ ಶೀಘ್ರದಲ್ಲಿ ಕೆಲಸವನ್ನು ಮಾಡಬೇಕೆಂದು ಅಧಿಕಾರಿಗಳೇ ಶಾಸಕ ಹಂಪನಗೌಡ ಬಾದರ್ಲಿ ತಾಕೀತು ಮಾಡಿದರು ನಂತರ ಅವರು ತಾಲ್ಲೂಕುನ ಸೊಮಲಾಪುರ ಮುಕುಂದ ಸಿಂಗಾಪುರ ಇತರ ಗ್ರಾಮಗಳು ಸೇರಿದಂತೆ ಶಾಸಕರು ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಜನರನ್ನು ಒಂದು ಕಡೆ ಸೇರಿಸಿ ಕಾರ್ಯಕ್ರಮದ ಸಭೆಯನ್ನು ನಡೆಸಿ ಮಾತನಾಡಿದ ಅವರು ಕುಡಿಯುವ ನೀರು ಪೂರೈಕೆ ಶೌಚಾಲಯ ನಿರ್ಮಾಣ ಶಿಕ್ಷಣ ರಸ್ತೆ ಅಭಿವೃದ್ಧಿ ಹಾಗೂ ವಿವಿಧ ಗ್ರಾಮಗಳ ಅಭಿವೃದ್ದಿ ಕಾರ್ಯಗಳನ್ನು ಮಾಡುವುದಕ್ಕೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಬೇಜವಾಬ್ದಾರಿ ಧೋರಣೆ ತೋರಬಾರದು ಹಾಗೂ ಜನಸ್ಪಂದನ ಸಭೆ ಗೆ ಒಂದು ಒಳ್ಳೆಯ ಪ್ರೇರಣೆ ಬರುತ್ತದೆ ಎಂದು ಹೇಳಿದರು.
ನಂತರ ಜನರು ಶಾಸಕರು ಮುಂದೆ ರೈತರು ಜಮೀನು ಸರ್ವೇ ಕಾರ್ಯದಲ್ಲಿ ಅಧಿಕಾರಿಗಳ ನಿರತವಾಗಿ ಸೇವೆ ಮಾಡುವಂಥದ್ದು ಆದರೆ ಯಾವುದೇ ಕಾರಣದಿಂದ ಟೆಕ್ನಿಕಲ್ ಪ್ರಾಬ್ಲಮ್ ಇದೆ ಎಂದು ಹೇಳಿ ಜನರನ್ನು ಆಫೀಸಿಗೆ ಮನೆಗೆ ಕಾಲು ಹರಿಯತನಕ ಅಧಿಕಾರಿಗಳು ತಿರುಗಾಡಿಸುತ್ತಾರೆ ಅಧಿಕಾರಿಗಳೇ ಎಚ್ಚರಿಕೆ ಸಂದೇಶವನ್ನು ನೀಡಬೇಕು ಎಂದು ಜನರು ಶಾಸಕರಲ್ಲಿ ಮನವಿ ಮಾಡಿದರು.
ಜನರು ಸಮಸ್ಯೆಗಳನ್ನು ಸರ್ಕಾರ ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಮಯ ವ್ಯರ್ಥವಾಗದೆ ಸರ್ಕಾರ ನಿಮ್ಮ ಸೇವೆ ಮಾಡುವುದಕ್ಕೆ ನಿಮ್ಮ ಜೊತೆಗೆ ಇರುತ್ತದೆ ಎಂದರು.ಅನೇಕ ಜನರು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಮತ್ತು ಸರ್ಕಾರದ ಯಾವುದೇ ಯೋಜನೆ ಗಳು ನಿಲ್ಲಿಸುವುದಿಲ್ಲ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ ಮತ್ತು ಪ್ರತಿ ಕುಟುಂಬದ ಮನೆ ಬಾಗಿಲಿಗೆ ತಲುಪಿಸುವಂತೆ ನಾವು ಮತ್ತು ಅಧಿಕಾರಿಗಳು ಮಾಡುತ್ತವೆ ಎಂದು ಭರವಸೆ ಮಾತುಗಳನ್ನು ಜನರು ಮುಂದೆ ನೀಡಿದರು. ಯಾವುದೇ ಇಲಾಖೆಯ ಯೋಜನೆಗಳ ಸಂಬಂಧ ಇರುವುದಿಲ್ಲ ಎಲ್ಲಾ ಯೋಜನೆಗಳು ಸಂಪೂರ್ಣವಾಗಿ ಸರ್ಕಾರ ಚರ್ಚೆ ಮಾಡಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ. ತಾಲ್ಲೂಕು ತಹಶೀಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಆರೋಗ್ಯ ತಾಲ್ಲೂಕು ಅಧಿಕಾರಿ ಡಾ ಅಯ್ಯನಗೌಡ ಬಿಸಿಮ್ ಅಧಿಕಾರಿ ಲಿಂಗಣ್ಣ ಜೆಸ್ಕಾಂ ವಿಭಾಗದ ಅಧಿಕಾರಿ ಮಲ್ಲಿಕಾರ್ಜುನ ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು
