ಉದಯವಾಹಿನಿ ಸಿರುಗುಪ್ಪ : ನಗರದಾದ್ಯಂತ ಹರ್ಬಲ್ ಲೈಪ್ ನೂಟ್ರೀಶನ್ ಕೇಂದ್ರಗಳು ಕಳೆದ ಹತ್ತು ವರ್ಷಗಳಿಂದಲೂ ಅನಧಿಕತವಾಗಿ ತಲೆಯೆತ್ತಿದ್ದರೂ ಸಂಬ0ದಿಸಿದ ಅಧಿಕಾರಿಗಳು ಕ್ರಮ ಜರುಗಿಸದಿರುವುದು ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದರು. ನಗರದಲ್ಲಿ ೧೦ಕ್ಕೂ ಅಧಿಕ ನೂಟ್ರೀಶನ್ ಕೇಂದ್ರಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಸಲ ಪುಡಿ ಮತ್ತು ಮಾತ್ರೆಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿದೆ. ಕೆಲವು ಕೇಂದ್ರಗಳು ಯಾವುದೇ ನಾಮಫಲಕವಿಲ್ಲದೇ ಯಾವುದೇ ವಿದ್ಯಾರ್ಹತೆಯಿಲ್ಲದೇ ನಡೆಸುತ್ತಿವೆ. ಕೆಲವೇ ಕೆಲವು ಕೇಂದ್ರಗಳು ನಾಮಫಲಕ ಹಾಕಿ ಚಿಕಿತ್ಸೆ ನಡೆಸುತ್ತಿದ್ದರೂ ಒಳಗಡೆ ಯಾವುದೇ ದರಪಟ್ಟಿಯನ್ನು ಹಾಕದೇ ನಡೆಸುತ್ತಿದ್ದಾರೆಂಬುದು ಜನಸಾಮಾನ್ಯರ ಆರೋಪವಾಗಿದೆ.
ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ, ಮುಖ್ಯರಸ್ತೆ, ವಾಯುವಿಹಾರ ನಡೆಸುವ ಕ್ರೀಡಾಂಗಣ, ಆಕರ್ಷಣೆಗೊಳಗಾಗುವಂತೆ ಮನವೊಲಿಸಿ ಎತ್ತರ, ತೂಕ, ಚರ್ಮಕಾಂತಿ, ವಯಸ್ಸು, ದೇಹದಲ್ಲಿನ ಕೊಬ್ಬಿನ ಪರಿವಿಡಿ(ಬಿ.ಎಮ್.ಐ) ಯಂತ್ರದಿ0ದ ಪರಿಶೀಲನೆ ನಡೆಸಿ ಜನರಲ್ಲಿ ರೋಗಗಳ ಬಗ್ಗೆ ಭಯಪಡಿಸಿ ಮದುಮೇಹ, ಬಿ.ಪಿ, ಶುಗರ್, ಮಂಡಿನೋವು, ಕೊಬ್ಬು ನಿವಾರಣೆ, ಹೃದಯ ಸಂಬ0ದಿತ ಕಾಯಿಲೆಯಂತಹ ಇನ್ನಿತರ ರೋಗಕ್ಕೆ ನ್ಯೂಟ್ರಿಶನ್ ಪುಡಿಯೇ ಮದ್ದು ಎಂಬ0ತೆ ತಪ್ಪು ತಿಳುವಳಿಕೆ ಜನರಿಗೆ ಮೋಸದ ಬಲೆಯನ್ನು ಬೀಸುತ್ತಿರುವುದು ಕಾಣಬಹುದಾಗಿದೆ.
ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲು ಪೋಲೀಸ್ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಪರವಾನಗಿಯಿಲ್ಲದೇ ಅನಧಿಕೃತವಾಗಿ ನಡೆಸುತ್ತಿದ್ದರಲ್ಲದೇ ಜೂಮ್ ಆ್ಯಪ್‌ನಲ್ಲಿ ಹರ್ಬಲ್ ನ್ಯೂಟ್ರೀಶನ್ ಬಗ್ಗೆ ವಿವರ ಪಡೆದುಕೊಳ್ಳಬಹುದೆಂಬ ಮಾಹಿತಿ ಹರಡುತ್ತಿದ್ದಾರೆಂದು ಷಡಕ್ಷರಿ, ಮಹೇಶ್, ಶ್ರೀನಿವಾಸ್ ಇನ್ನಿತರರು ತಿಳಿಸಿದರು.
ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ಇಂತಹ ಕೇಂದ್ರಗಳನ್ನು ನಡೆಸಲು ಯಾವುದೇ ಪರವಾನಗಿ ಕೊಟ್ಟಿರುವುದಿಲ್ಲ ಇಂತಹ ಅನಧಿಕೃತ ಕೇಂದ್ರಗಳೇನಾದರೂ ಕಂಡುಬ0ದಲ್ಲಿ ದಾಳಿ ನಡೆಸಲಾಗುವುದೆಂದರು
