
ಉದಯವಾಹಿನಿ ಕೊಲ್ಹಾರ: ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಉಳುಮೆ ಮಾಡುತ್ತಿದ್ದ ಜಮೀನಿಗೆ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಕಾರ್ಯಾಲಯದ ಅಧಿಕಾರಿಗಳು ಗಡಿ ಗುರುತು ಮಾಡಿದರು.ಶುಕ್ರವಾರ ರಂದು ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಪಟ್ಟಣದ ಇದ್ಗಾ ಮೈದಾನದ ಹತ್ತಿರ ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯ ಜಮೀನು ಒತ್ತುವರಿ ಮಾಡಿಕೊಂಡು ಕೆಲ ರೈತರು ಉಳುಮೆ ಮಾಡುತ್ತಿರುವ ಮಾಹಿತಿ ಸಂಗ್ರಹಿಸಿ ಸ್ಥಾನಿಕ ಪರಿಶೀಲನೆ ನಡೆಸಿ ಗಡಿ ಗುರುತು ಮಾಡುವ ಮೂಲಕ ಒತ್ತುವರಿ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದರು .ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್ ಮಂಜನಾಳ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಪುನರ್ವಸತಿ ಅಧಿಕಾರಿ ಕಿಶನ್ ಕಲಾಲ್, ಶಿರಸ್ತೇದಾರ ಟಿ ಎಸ್ ಮೋಕಾಶಿ, ಕಂದಾಯ ನಿರೀಕ್ಷಕರು ಬಿ ಎಸ್ ಕಮತಗಿ, ಪ ಪಂ ಸದಸ್ಯರಾದ ಸಿ ಎಸ್ ಗಿಡ್ಡಪ್ಪಗೋಳ, ತೌಸೀಪ್ ಗಿರಗಾಂವಿ, ದಸ್ತಗೀರ ಕಲಾದಗಿ, ಪಂ ಪಂ ಸದಸ್ಯರ ಪ್ರತಿನಿಧಿ ಇಕ್ಬಾಲ್ ನದಾಫ ಹಾಗೂ ಇತರರು ಇದ್ದರು.
