ಉದಯವಾಹಿನಿ ಅರಸೀಕೆರೆ: ತಾಲ್ಲೂಕು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಜಯ ಪದ್ಮ ರವರಿಗೆ ರಾಜ್ಯ ಸರ್ಕಾರದ ಅಧೀನದಲ್ಲಿರುವ ನಿಗಮ ಮಂಡಳಿಗೆ ಸರ್ಕಾರದ ನಾಮನಿರ್ದೇ ಶಿತ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಅರಸೀಕೆರೆ ತಾಲೂಕಿನ ಮಹಿಳಾ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಅರಸೀಕೆರೆ ತಾಲೂಕಿನಲ್ಲಿ ಜಯ ಪದ್ಮಾವರವರು ಈ ಹಿಂದೆಯೂ ಸಹ ತಾಲೂಕು ನಗರದ ಮಹಿಳಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಮತ್ತು ಅರಸೀಕೆರೆ ನಗರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ನೊಂದ ಮಹಿಳೆಯರು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದ ಮಹಿಳೆಯರ ಪರ ನಿಂತು ಅವರ ಕಷ್ಟ ಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ. ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಜಯಪದ್ಮರವರು ಕಳೆದ ನಾಲ್ಕು ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಪಕ್ಷದ ಅಭ್ಯರ್ಥಿಗೆ ಕಾಂಗ್ರೆಸ್ ಮತಗಳನ್ನು ಕೊಡಿಸುವಲ್ಲಿ ಶ್ರಮಿಸಿರುತ್ತಾರೆ 2004 ರಿಂದ ಇಲ್ಲಿಯವರೆಗೆ ಕಳೆದ 20 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿರುತ್ತಾರೆ ಆದ್ದರಿಂದ ಇವರಿಗೆ ಪಕ್ಷದ ನಾಯಕರು ಮತ್ತು ಹಾಸನ ಜಿಲ್ಲಾ ಮುಖಂಡರು ಅರಸೀಕೆರೆ ತಾಲೂಕಿನ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು ಇವರಿಗೆ ರಾಜ್ಯಮಟ್ಟದ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರು ಪಕ್ಷದ ಮುಖಂಡರಲ್ಲಿ ಒತ್ತಾಯಿಸಿರುತ್ತಾರೆ.

ಪ್ರತಿಕ್ರಿಯೆ
ಜಯ ಪದ್ಮ ಪತ್ರಿಕೆಯೊಂದಿಗೆ ಮಾತನಾಡಿ ನಾವು ಅರಸಿಕೆರೆ ತಾಲೂಕಿನಲ್ಲಿ ಮತ್ತು ಹಾಸನ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಮತ್ತು ಶ್ರಮವಹಿಸಿ ಕಳೆದ 20 ವರ್ಷಗಳಿಂದಲೂ ಸಂಘಟನೆ ಮಾಡುತ್ತಾ ಬಂದಿದ್ದು ನಮ್ಮ ಪಕ್ಷದ ಸೇವೆಯನ್ನು ಗುರುತಿಸಿ ಪಕ್ಷದ ಮುಖಂಡರು ನಮಗೆ ಸ್ಥಾನಮಾನವನ್ನ ಕಲ್ಪಿಸುವ ಆಶಾಭಾವನೆಯನ್ನು ಹೊಂದಿದ್ದೇನೆ ಎಂದು ಜೈ ಪದ್ಮ ಪತ್ರಿಕೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!