ಉದಯವಾಹಿನಿ, ಮುಂಬೈ :  ಸನ್ನಿ ಡಿಯೋಲ್ ಅಭಿನಯದ ‘ಗದರ್ ೨’ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದರೆ, ಬೇರೆ ನಟರ ಅಭಿನಯದ ಚಿತ್ರಗಳು ಸನ್ನಿ ಡಿಯೋಲ್ ಚಿತ್ರದ ಮುಂದೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ.
ಬೇರೆ ಚಿತ್ರಗಳಿಗೆ ಗದರ್ ೨ ಚಂಡಮಾರುತದ ಮುಂದೆ ನಿಲ್ಲಲು ಸಾಧ್ಯವಾಗುತ್ತಿಲ್ಲ.ಈ ಚಿತ್ರ ಬಿಡುಗಡೆಯಾದ ೮ನೇ ದಿನಕ್ಕೆ ಎಷ್ಟು ಕೋಟಿ ಗಳಿಸಿದೆ ಎಂಬ ಮಾಹಿತಿ ಇಲ್ಲಿದೆ.
ಶುಕ್ರವಾರ ಮಧ್ಯಾಹ್ನದವರೆಗೆ ಟಿಕೆಟ್ ಮಾರಾಟದಲ್ಲಿ ಮತ್ತು ಸಂಜೆಯಿಂದಲೇ ಮುಂಗಡ ಬುಕ್ಕಿಂಗ್‌ನಲ್ಲಿ ಗದರ್ ೨’ ಚಿತ್ರವು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ೩೦೦ ಕೋಟಿ ರೂಪಾಯಿಗಳನ್ನು ದಾಟಿದೆ. ಕೇವಲ ಎಂಟು ದಿನಗಳಲ್ಲಿ ೩೦೦ ಕೋಟಿ ಗಳಿಸಿದ್ದು ಕೂಡ ಈ ಚಿತ್ರದ ದೊಡ್ಡ ಸಾಧನೆಯೇ ಸರಿ. ಅತಿ ಕಡಿಮೆ ದಿನಗಳಲ್ಲಿ ಈ ಸಾಧನೆ ಮಾಡಿದ ಎರಡನೇ ಚಿತ್ರ ‘ಗದರ್ ೨’. ಈ ಹಿಂದೆ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರ ಬಿಡುಗಡೆಯಾದ ಆರು ದಿನಗಳಲ್ಲಿ ಈ ಅಂಕಿ ಅಂಶವನ್ನು ದಾಟಿತ್ತು.

Leave a Reply

Your email address will not be published. Required fields are marked *

error: Content is protected !!