ಉದಯವಾಹಿನಿ, ಜೈಪುರ : ರಾಜಸ್ಥಾನದ ಕೋಟಾದಲ್ಲಿ ನಡೆದ ಐಐಟಿ ಮತ್ತು ನೀಟ್ ಅಭ್ಯರ್ಥಿಗಳ ಆತ್ಮಹತ್ಯೆಯನ್ನು ಅಶೋಕ್ ಗೆಹ್ಲೋಟ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಅಗತ್ಯ ಸಲಹೆ ನೀಡಲು ತಜ್ಞರ ಸಮಿತಿ ರಚಿಸಲಾಗಿದ್ದು ಸಮಿತಿಯು ತನ್ನ ವರದಿಯನ್ನು ೧೫ ದಿನಗಳಲ್ಲಿ ಸಲ್ಲಿಸಲಿದೆ. ಈ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕೋಟಾದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಹಿನ್ನೆಲೆಯಲ್ಲಿ ನಿನ್ನೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ, ೯ ಮತ್ತು ೧೦ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಓದು ಹೊರೆಯಾಗುತ್ತಿದೆ.
೯ ಮತ್ತು ೧೦ನೇ ತರಗತಿಯಲ್ಲಿರುವಾಗಲೇ ಕೋಚಿಂಗ್ ಸೆಂಟರ್‌ಗಳಿಗೆ ಕಳುಹಿಸುವ ಮೂಲಕ ಘೋರ ಅಪರಾಧ ಎಸಗುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು
ಇದು ಸಂಪೂರ್ಣವಾಗಿ ಪೋಷಕರ ತಪ್ಪು. ಮತ್ತೊಂದೆಡೆ, ಬೋರ್ಡ್ ಪರೀಕ್ಷೆಗಳಿಗೆ ಅಧ್ಯಯನ ಮಾಡುವಾಗ ಮತ್ತು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವಾಗ, ಅವರು ಅಪಾರ ಒತ್ತಡವನ್ನು ಅನುಭವಿಸುತ್ತಾರೆ. ಇನ್ನು ಮುಂದೆ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ನೋಡಲು ತಾವು ಬಯಸುವುದಿಲ್ಲ ಈ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬೇಕು ಎಂದರು. ಒಬ್ಬ ವಿದ್ಯಾರ್ಥಿ ಸತ್ತರೂ ಪಾಲಕರು ಅನುಭವಿಸುವ ನೋವಿಗೆ ಕೊನೆಯಿಲ್ಲ ಎಂದರು .

Leave a Reply

Your email address will not be published. Required fields are marked *

error: Content is protected !!