
ಉದಯವಾಹಿನಿ,ಇಂಡಿ : ಇಂಡಿ ಅಧಿಕಾರಿಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಹೂಗುಚ್ಛ ಹಾರ ಇತ್ಯಾದಿ ನೀಡುವ ಬದಲಾಗಿ ಕಿಂಗ್ ಸೈಜ್ ನೋಟ್‌ಬುಕ್ ಅಥವಾ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ನೀಡುವ ಬಗ್ಗೆ ಮೇಲಾಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಬೇಟಿ ನೀಡಿದಾಗ ಅಥವಾ ಅಧಿಕಾರಿ ನೌಕರರು ಮೇಲಾಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ಬಂದಾಗ ಅಧಿಕಾರಿಗಳಿಗೆ ಹೂಗುಚ್ಛ ಹಾರ, ಹಣ್ಣಿನ ಬುಟ್ಟಿ, ಶಾಲು ಇತ್ಯಾದಿ ನೀಡುವುದು ಸ್ವಾಭಾವಿಕವಾಗಿದೆ. ಇದರ ಬದಲಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿ ನೌಕರರು ಕಿಂಗ್ ಸೈಜಿನ ನೋಟ್ ಬುಕ್ ಅಥವಾ ಸಾಮಾನು ಜ್ಞಾನ ಮಹಾನ್ ಪುರುಷರ ಸಂತ್ ಹೋರಾಟಗಾರರ ವಿಜ್ಞಾನಿಗಳ ಎನ್ ಸೈಕೋಪಿಡಿಯಾ ನಿಘಂಟು ಇತ್ಯಾದಿ ಪುಸ್ತಕಗಳನ್ನು ನೀಡಿ ಅಧಿಕಾರಿಗಳನ್ನು ಗೌರವಿಸಬಹುದಾಗಿದೆ. ಹೀಗೆ ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಅಥವಾ ಬಡ ಕುಟುಂಬದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದರಿಂದ ಜನ ಸಾಮಾನ್ಯರ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನದ ಮಟ್ಟವನ್ನು ಹೆಚ್ಚಿಸಬಹುದಾಗಿರುತ್ತದೆ. ಆದುದರಿಂದ ಎಲ್ಲ ಅಧಿಕಾರಿಗಳು ತಮ್ಮ ಅಧೀನ ಎಲ್ಲ ಕಚೇರಿಗಳು ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಮತ್ತು ಸರ್ಕಾರಿ ಅಧಿಕಾರಿಗಳನ್ನು ಬೇಟಿ ಮಾಡಲು ಬರುವ ಸಾರ್ವಜನಿಕರಿಗೂ ಸಹ ಈ ತಿಳುವಳಿಕೆಯನ್ನು ನೀಡಲು ಮತ್ತು ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಬಡ ಕುಟುಂಬದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲು ತಿಳಿಸಿ.
ಈ ಸರಕಾರದ ಆದೇಶದಂತೆ ಇಂಡಿ ತಾಲೂಕಿಗೆ ಹೊಸದಾಗಿ ಅಧಿಕಾರ ಸ್ವೀಕರಿಸಿದ ತಹಶೀಲ್ದಾರ್ ವಿಜಯ್ ಕುಮಾರ್ ಅವರನ್ನು ದಲಿತ ಮುಖಂಡರು ಹಾಗು ಕಾಂಗ್ರೆಸ್ ಪಕ್ಷದ ಯುವ ನಾಯಕರು ಆದ ಶಿವಾನಂದ ಮುರಮಾನ ಅವರು ನೋಟು ಬುಕ್ ಕೊಟ್ಟು ತಹಶೀಲ್ದಾರ್ ಅವರನ್ನು ಗೌರವಿಸಿದರು ಈ ಸಂದರ್ಭದಲ್ಲಿ ವಿಜಯಕುಮಾರ್ ಮುರಮಾನ ಆನಂದ್ ಪವರ್ ರಮೇಶ್ ಧರೆನವರ್ ಮಂಜು ನಿರಂಜನ್. ರಾಹುಲ್ ಸರ್ಕಲ್ ಕಲಾಟಿ ಪಾಲ್ಗೊಂಡಿದ್ದರು.
