Exif_JPEG_420

ಉದಯವಾಹಿನಿ‌ ಸವದತ್ತಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿಗೆ ನೂತನವಾಗಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾಕ್ಟರ್ ಶ್ರೀಪಾದ ಸಬನೀಸ ಅವರಿಗೆ ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿವತಿಯಿಂದ ಹಾಗೂ ಆರೋಗ್ಯ ಇಲಾಖೆಯ ಲಿಪಿಕ ಸಿಬ್ಬಂದಿಗಳ ವತಿಯಿಂದ  ತಾಲೂಕು ಕಾರ್ಯಾಲಯದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು ಹಾಗೂ ಪದೋನ್ನತಿ ಹೊಂದಿ  ಧಾರವಾಡ ಜಿಲ್ಲೆಗೆ ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ವಗಾ೯ವಣೆ ಹೊಂದಿರುವ ಡಾಕ್ಟರ್ ಮಹೇಶ್ ಚಿತ್ತರಗಿ ಹಾಗೂ ರಾಮದುರ್ಗ ತಾಲೂಕಿನ ಆರೋಗ್ಯ ಅಧಿಕಾರಿ ಗಳಾದ ನವೀನ ನಿಜಗುಣಿ ಯವರನ್ನು ಸನ್ಮಾನಿಸಲಾಯಿತು.
    ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ವಿಜಯ ನರಗುಂದ ಸಿ ಎಂ ಓ ಮಲ್ಲನಗೌಡರ ಕ್ರಿಷ್ಣಾ ಹನಸಿ ರಾಮಣ್ಣ ಹಿರೇಕುಂಬಿ  ಜ್ಯೋತಿ ಬಸರಿ ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ್ ಮೂಗಬಸವ ಕಾರ್ಯಾಧ್ಯಕ್ಷರಾದ ಎ ಕೆ ಮುಲ್ಲಾ  ಎನ್ ಎ  ಪೂಜೇರ ಅಶೋಕ್ ಮುರಗೋಡ ಆಯ್ ಎಸ್ ದಿಗಂಬರಮಠ . ಈ ಸಂದರ್ಭದಲ್ಲಿ ಲಿಪಿಕ ಸಿಬ್ಬಂದಿಗಳಾದ ರಮೇಶ್ ಗೋವನ್ನವರ ಸೈಯದ್ ದಪೇದಾರ ಅಬ್ದುಲ್ ಬಿಸ್ತಿ ಜಿನೇಂದ್ರ ಗೋಮಾಜಿ ಮಂಜು ಸಿಂಗನ್ನವರ ರಾಹುಲ್ ರಾಜು ಅವರಾದಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!