
ಉದಯವಾಹಿನಿ ದೇವರಹಿಪ್ಪರಗಿ: ಗ್ರಂಥಾಲಯ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಹಶೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಇರುವ ಸಾರ್ವಜನಿಕ ಗ್ರಂಥಾಲಯಕ್ಕೆ ಶನಿವಾರದಂದು ದಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ತಾಂತ್ರಿಕತೆ ಬೆಳೆದಂತೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಜಾಗತಿಕ ಸ್ಪರ್ಧೆ ಎದುರಿಸಲು ಉತ್ತಮ ಗ್ರಂಥಾಲಯಗಳ ಅಗತ್ಯವಿದೆ, ಪುಸ್ತಕಗಳು ಜ್ಞಾನ ನೀಡುವ ಜತೆಗೆ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿ ಆಗಲಿದೆ. ಗ್ರಂಥಾಲಯಗಳು ಓದುಗರ ಮತ್ತು ಪುಸ್ತಕಗಳ ಮಧ್ಯೆ ಆಪ್ತ ಸಂಬಂಧ ಬೆಳೆಸುತ್ತದೆ. ಆದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಇರುವ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು, ಐಎಎಸ್, ಐಪಿಎಸ್ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿನ ಪುಸ್ತಕಗಳ ಪ್ರಯೋಜನ ಪಡೆದುಕೊಂಡು ತಾಲೂಕಿನ ಹೆಸರು ತರಬೇಕು ಎಂದು ಹೇಳಿದರು.
ನಂತರ ಗ್ರಂಥ ಪಾಲಕರಿಗೆ ಸಾರ್ವಜನಿಕರಿಗೆ ಸಮಸ್ಯೆ ಆಗದ ಹಾಗೆ ಕಾರ್ಯನಿರ್ವಹಿಸಲು ಸೂಚಿಸಿದರು.ಪ ಪಂ ಸದಸ್ಯರ ಜೊತೆ ಮಾತನಾಡಿ ನೂತನ ತಾಲೂಕಿನ ಪಟ್ಟಣದ ಸೌಂದರ್ಯ ಕರಣಕ್ಕಾಗಿ ಸಹಕಾರ ನೀಡುವುದಾಗಿ ತಿಳಿಸಿದರು. ಪ ಪಂ ಮುಖ್ಯಾಧಿಕಾರಿ ಎಲ್ ಡಿ ಮುಲ್ಲಾ ಮಾತನಾಡಿ, ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಅಭಿವೃದ್ಧಿಗೆ ಬೇಕಾದ ಸಹಕಾರ ಕೇಳಿದರೆ ಪ ಪಂ ಯಿಂದ ನೀಡಲು ಸಿದ್ಧ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ ಪಂ ಸದಸ್ಯರುಗಳಾದ ಡಾ.ಗುರುರಾಜ ಗಡೇದ, ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ, ಸಿಂಧೂರ ಡಾಲೇರ, ಪ್ರತಿನಿಧಿಗಳಾದ ಕಾಶಿನಾಥ ಕಡ್ಲೆವಾಡ, ಸೋಮು ದೇವೂರ,ಪ ಪಂ ಜೆಇ ಗುರುರಾಜ ಬಿರಾದಾರ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಸೋಮಶೇಖರ ಭೋವಿ ಹಾಗೂ ಮಾರ್ತುಂಡ ಗುಡಿಮನಿ ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.
