
ಉದಯವಾಹಿನಿ ಕುಶಾಲನಗರ :- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಮೂಲಕ ಗುಹ್ಯ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ವತಂತ್ರೋತ್ಸವದ ಅಂಗವಾಗಿ ಶಾಲೆಯಲ್ಲಿ ಬೆಳೆದು ನಿಂತಿದ್ದ ಕಾಡು ಬಳ್ಳಿ ಗಿಡಗಳನ್ನು ತೆರವುಗೊಳಿಸಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟನೆಗಳಾದ ದುರ್ಗಾದೇವಿ, ಓಂ ಶಕ್ತಿ, ಸನ್ನಿಧಿ, ಏಕದಂತ, ಉದಯ ಸೂರ್ಯ ಸಂಘಟನೆಯ 25ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಸೇವಾ ಪ್ರತಿನಿಧಿ ಉಷಾ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತಿ ವರ್ಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು. ಗ್ರಾಮದ ಧಾರ್ಮಿಕ ಕೇಂದ್ರ ಸೇರಿದಂತೆ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಉದಯ್, ಕಾರ್ಯದರ್ಶಿ ಧನುಷ್
ಪ್ರಮುಖರಾದ ಮಣಿ,ವಿಶ್ವನಾಥ್ ,, ರಮೇಶ್, ಪುಷ್ಪ, ಸಂಧ್ಯಾ, ಪಾರ್ವತಿ, ರಶ್ಮಿಯ, ದೀಕ್ಷಿತ್, ಶಾರದಾ, ಭವಾನಿ, ಜ್ಯೋತಿ ಸೇರಿದಂತೆ ಮತ್ತು ಇತರರು ಇದ್ದರು
