
ಉದಯವಾಹಿನಿ ಇಂಡಿ: ವ್ಯಕ್ತಿಯ ಬದುಕಿನುದ್ದಕ್ಕೂ ವಿಜ್ಞಾನದ ಪಾತ್ರ ಅನನ್ಯ. ಗ್ರಾಮೀಣ ಭಾಗದ ಮಕ್ಕಳಲ್ಲಿ ಈ ವಿಷಯದ ಕುರಿತು ಆಸಕ್ತಿ ಮೂಡಿಸಬೇಕು ಅಗತ್ಯವಾದ ಪ್ರಾಯೋಗಿಕ ಚಟುವಟಿಕೆಗಳನ್ನು ಕೊಡಬೇಕು ಎನ್ನುವುದು ನಮ್ಮ ಆಶಾಯವಾಗಿತ್ತು ಎನ್ನುತ್ತಾರೆ ತೆನ್ನಿಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಶಾ ನಾಯಕ.ತಾಲೂಕಿನ ಝಳಕಿ ಮತ್ತು ತೆನ್ನಿಹಳ್ಳಿ ಗ್ರಾಮ ಪಂಚಾಯಿತಗಳ ಅನುದಾನದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಅದರಲ್ಲೂ ಮಕ್ಕಳ ಹಾಜರಾತಿ ಹೆಚ್ಚಿರುವ ಶಾಲೆಗಳನ್ನು ಗುರುತಿಸಿ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಪಠ್ಯಕ್ಕೆ ಪೂರಕವಾದ ಪರಿಕರಗಳನ್ನು ವಿತರಿಸಿದ್ದಾರೆ. ವಿದ್ಯಾರ್ಥಿಗಳೆಲ್ಲ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ಹೊಂದಿ ಸಮಾಜಕ್ಕೆ ಕೊಡುಗೆ ನೀಡುವ ಸಂಪನ್ಮೂಲ ವ್ಯಕ್ತಿಗಳಾಗಲಿ ಎನ್ನುವ ಉದ್ದೇಶದಿಂದ ಗ್ರಾಮ ಪಂಚಾಯತ್ ಅನುದಾನದ ಅಡಿಯಲ್ಲಿ ವಿಜ್ಞಾನದ ಪರಿಕರಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸುತ್ತಾರೆ. ಇದೆ ರೀತಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ವರದಾನ ಆಗುವಲ್ಲಿ ಪ್ರತಿ ಗ್ರಾಮ ಪಂಚಾಯತಿಗಳು ಕೈ ಜೋಡಿಸಬೇಕು ಎನ್ನುತ್ತಾರೆ ಮುಖ್ಯ ಶಿಕ್ಷಕ ಶಹಾಜಿ ನಾಗಣೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕುರ್ಚಿ ಮೇಜುಗಳನ್ನು ವಿತರಿಸಿದ್ದೇವೆ. ಸರ್ಕಾರಿ ಪ್ರೌಢ ಶಾಲೆಗಳಿಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪರಿಕರಗಳನ್ನು ನೀಡಿದ್ದೇವೆ. ಮಕ್ಕಳು ಸಂತೋಷದಿಂದ ಕಲಿಯತ್ತ ಆಕರ್ಷಿತರಾಗಬೇಕೆಂಬುದೇ ನಮ್ಮ ಉದ್ದೇಶ ಎಂದು ಝಳ ಕಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಜಬ್ಬರ ಅಲಿ ಹಿಳ್ಳಿ ಹೇಳಿದರು.ಈ ಸಂದರ್ಭದಲ್ಲಿ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
