ಉದಯವಾಹಿನಿ, ಔರಾದ್ : ಪಾಲಿಟೆಕ್ನಿಕ್ ಕಾಲೇಜಿಗೆ ಖಾಯಂ ಉಪನ್ಯಾಸಕರನ್ನು ಒದಗಿಸುವ ಕುರಿತು ತಹಶಿಲ್ದಾರ ಮಲಶೇಟ್ಟಿ ಚಿದ್ರೆ ಅವರ ಮುಖಾಂತರ ತಾಂತ್ರಿಕ ಶಿಕ್ಷಣ ಇಲಾಖೆಗೆ ಎಬಿವಿಪಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.ಪಟ್ಟಣದ ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಿರ್ವಹಿಸುತ್ತಿದ್ದು ಪ್ರಸ್ತುತ ಕಾಲೇಜಿನ ಪರಿಸ್ಥಿತಿ ಬಹಳ ಗಂಭೀರವಾಗಿ ದೆ. 2009-10ರಲ್ಲಿ ಕಾಲೇಜು ಪ್ರಾರಂಭವಾಗಿದ್ದು ಇಂದಿಗೆ ಸುಮಾರು ಹದಿಮೂರು ವರ್ಷಗಳು ಕಳೆದಿರುತ್ತದೆ ಪ್ರಸ್ತುತ ಸುಮಾರು 7 ಜನ ಖಾಯಂ ಉಪನ್ಯಸಕರು ವರ್ಗಾವಣೆ ಆದಕಾರಣ ವಿದ್ಯಾಲಯದಲ್ಲಿ ಉಪನ್ಯಾಸ ಮಾಡಲು ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ವರ್ತಮಾನ ಹಾಗೂ ಭವಿಷ್ಯ ಅಂಧಕಾರದತ್ತ ಸಾಗುತ್ತಿದೆ. ಸೂಮಾರು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ‌ವಾದ‌ ಕಾಲೇಜು ಕಟ್ಟಡ ಭಿಕೊಎನ್ನುತ್ತಿದೆ ಕಾಲೇಜಿನಲ್ಲಿ ಒಟ್ಟು 31 ಹುದ್ದೆಗಳು ಖಾಲಿ ಇವೆ. ಕಾಲೇಜಿಗೆ ಮಂಜೂರಾದ ಆಡಳಿತ ಸಿಬ್ಬಂದಿಗಳು 23 . ಖಾಲಿ ಇರುವ ಸಂಖ್ಯೆ 19 ಕಾಲೇಜಿನಲ್ಲಿ ಉಪನ್ಯಾಸ ಮಾಡಲು ಹಾಗೂ ಆಡಳಿತಾತ್ಮಕ ಕೆಲಸ ಮಾಡಲು ಸಿಬ್ಬಂದಿಗಳು ಇಲ್ಲದಿರುವುದು ಖಂಡನೀಯವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಸಂಕಷ್ಟಕ್ಕೆ ಒಳಗಾಗಬೇಕಾಗಿದೆ ನಮ್ಮ ಈ ಮನವಿಯನ್ನು ಆಲಿಸಿ ನಮ್ಮ ಬೇಡಿಕೆಗಳು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಬೀದರ್- ಔರಾದ ರಾಷ್ಟ್ರೀಯ ಹೆದ್ದಾರಿ ಬಂದು ಮಾಡಿ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಬಿವಿಪಿ ಪ್ರಮುಖರಾದ ಹಾವಪ್ಪ ದ್ಯಾಡೆ ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಮಲಶೇಟ್ಟಿ ಚಿದ್ರೆ ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ, ಉಪನ್ಯಾಸಕರಾದ ಡಾ ಸಂಜುಕೂಮಾರ, ಹಣಮಂತ ಕಾಳೆ,ಎಬಿವಿಪಿಯ ಅಶೋಕ್ ಶೆಂಬೆಳ್ಳಿ ಅನಿಲ್ ಮೆತ್ರೆ, ಜಿಲ್ಲಾ ಸಂಚಾಲಕ ಶಶಿಕಾಂತ್ ರ್ಯಾಕಲೆ, ನಗರ ಕಾರ್ಯದರ್ಶಿ ನವನಾಥ ಕೊಳಿ, ಮಲ್ಲಿಕಾರ್ಜುನ್ ಟೆಕ್ರಾಜ್, ಪೋಲಿಸ್ ಠಾಣೆಯ ಸಿಬ್ಬಂದಿ ಮಾರತರೆಡ್ಡಿ, ಕೊಟರೇಶ,ನರಸಾರೆಡ್ಡಿ ಬಂದೊಬಸ್ತ ನೀಡಿದರು ಹಾಗೂ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೋರಾಟದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!