ಉದಯವಾಹಿನಿ, ಚೀನಾದ ವಿರೋಧದ ಬೆನ್ನಲ್ಲೇ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಬ್ಯಾಟಲ್ ಆಫ್ ಗಲ್ವಾನ್’ ಹೆಸರನ್ನು `ಮಾತೃಭೂಮಿ’ ಎಂದು ಬದಲಿಸಲಾಗಿದೆ. ಸಲ್ಮಾನ್ ಖಾನ್ ಅಭಿನಯದ ಸಿನಿಮಾಗೆ ಮೊದಲು `ಬ್ಯಾಟಲ್ ಆಫ್ ಗಲ್ವಾನ್’ ಎಂದು ಹೆಸರಿಡಲಾಗಿತ್ತು. ಆದರೆ ಇದೀಗ `ಮಾತೃಭೂಮಿ’ ಎಂದು ಬದಲಿಸಲಾಗಿದೆ. ಜೊತೆಗೆ `ಮೇ ವಾರ್ ರೆಸ್ಟ್ ಇನ್ ಪೀಸ್’ ಎಂದು ಅಡಿಬರಹ ನೀಡಲಾಗಿದೆ. ಯುದ್ಧವನ್ನು ತಾತ್ವಿಕ ದೃಷ್ಟಿಕೋನದಿಂದ ನೋಡುವ ಹಾಗೂ ಶಾಂತಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಚಿತ್ರತಂಡ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಏ.17ರಂದು ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಅಕ್ಷಯ್ ಕುಮಾರ್‌ರ `ಭೂತ್ ಬಂಗ್ಲಾ’ ಸಿನಿಮಾ ಇರುವ ಕಾರಣ ಈಗ ಆಗಸ್ಟ್‌ಗೆ ಮುಂದೂಡಿಕೆ ಮಾಡಲಾಗಿದೆ.
ಈ ಮಧ್ಯೆ, ಚೀನಾ ವಿರೋಧಕ್ಕೆ ಚೀನಾ ಹೆಸರು ಹೇಳಲು ಭಯವೇ? ನಾವು ಹೇಗೆ ಸರೆಂಡರ್ ಆಗಿದ್ದೇವೆ ಎಂದು ಎಲ್ಲರಿಗೂ ಗೊತ್ತಿದೆ ಅಂತ ಕಾಂಗ್ರೆಸ್ ಸಂಸದ ತಾರಿಖ್ ಅನ್ವರ್ ರಾಜಕೀಯ ಬೆರೆಸಿದ್ದಾರೆ
