
ಉದಯವಾಹಿನಿ,ಚಿಂಚೋಳಿ: ಮನೆಯಲ್ಲಿ ಮಾಡುವ ಊಟದ ಹಾಗೆ ಶಾಲೆಯಲ್ಲಿಯು ಕೂಡ ಬಿಸಿಯೂಟ ತಯ್ಯಾರಿಸಿ ಶಾಲಾಮಕ್ಕಳಿಗೆ ಗುಣಮಟ್ಟದ ಒಳ್ಳೆಯ ಬಿಸಿಯೂಟ ನೀಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜೀಯಾ ತರನ್ನುಮ್ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಅಕ್ಷರ ದಾಸೋಹ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಿಸಿಯೂಟ ಅಡುಗೆ ಸಹಾಯಕರ ಮೇಲ್ಚಾರಕರ ಅಡುಗೆ ಸಿಬ್ಬಂದಿಗಳ ಅರ್ಧ ದಿನದ ತರಬೇತಿ ಕೇಂದ್ರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟ ಸೇವಿಸುವುದು ನನಗೆ ತಂಬಾ ಇಷ್ಟ ಹಾಗಾಗಿ ನಾನು ಮಕ್ಕಳ ಜೋತೆಗೂಡಿ ಊಟ ಮಾಡುತ್ತೇನೆ ಜೋತೆಯಲ್ಲಿ ಊಟದ ಗುಣಮಟ್ಟ ಪರೀಕ್ಷಿಸುತ್ತೇನೆ.ಬಿಸಿಯೂಟ ಅಡುಗೆ ಸಹಾಯಕಿಯರು,ಮೇಲ್ಚಾರಕಿಯರು,ಸಿಬ್ಬಂ ದಿಗಳು ಶಾಲಾಮಕ್ಕಳಿಗೆ ಒಳ್ಳೆಯ ದೃಷ್ಟಿಯಿಂದ ನೋಡಿಕೊಂಡು ತಮ್ಮ ಮನೆಯ ಮಕ್ಕಳಂತೆ ನೋಡಿಕೊಂಡು ಉತ್ತಮವಾಗಿ ಅಡುಗೆ ಮಾಡಿ ಅಡುಗೆಯಲ್ಲಿ ಗುಣಮಟ್ಟದ ತರಕಾರಿ ಹಾಕಿ ಅಕ್ಕಿಯನ್ನು ಸ್ವಚ್ಚ ಮಾಡಿ ಮನೆಯ ತರಹ ಊಟ ನೀಡಬೇಕು.ಅಡುಗೆ ಮಾಡುವವರು ಮಕ್ಕಳಿಗೆ ಕೈ ಸ್ವಚ್ಚತೆ ತೊಳೆಯಬೇಕು,ಊಟ ಕೆಳಗಡೆ ಬೀಸಾಕಬಾರದು,ಸ್ವಚ್ಚತೆಯಿಂದ ಊಟ ಮಾಡಬೇಕು,ಉತ್ತಮ ಶಿಕ್ಷಣ ಪಡೆಯಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು ಎಂದು ಅಡುಗೆ ಸಹಾಯಕಿಯರಿಗೆ ಕಿವಿಮಾತು ಹೇಳಿದರು.ಊಟದ ಜೋತೆಗೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಇಂದಿನ ಮಕ್ಕಳು ಭವಿಷ್ಯದ ದೇಶದ ಪ್ರಜೆಗಳು,ಶೌಚಾಲಯ,ಕುಡಿಯುವ ನೀರು,ಇರಬೇಕು,ಫ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದರು.
ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಹಾಶಪ್ಪ ಪೂಜಾರಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ತಾಪಂ.ಇಓ ಶಂಕರ ರಾಠೋಡ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಸಿಡಿಪಿಒ ಗುರುಪ್ರಸಾದ ಕವಿತಾಳ,ಬಿಇಓ ಹಣಮಂತ ರಾಠೋಡ್,ಪ್ರಭುಲಿಂಗ ಬುಳ್ಳಾ,ವಿಶ್ವನಾಥ ಸಜ್ಞನ್,ಗಿರಿರಾಜ ಸಜ್ಜನ,ಮಕ್ಸೂದ್ ಅಲಿ,ರವಿಕುಮಾರ ಚಿಟ್ಟಾ,ಕೇಶವ ಕುಲಕರ್ಣಿ,ಶಾಲೆಗಳ ಮುಖ್ಯಗುರುಗಳು,ಅಡುಗೆ ಮೇಲ್ಚಾರಕರು,ಸಹಾಯಕಿಯರು,ಸಿಬ್ಬಂದಿ ಗಳು ಅನೇಕರಿದ್ದರು.
