ಉದಯವಾಹಿನಿ  ಚಿತ್ರದುರ್ಗ/ಬೆಳಗಟ್ಟ :ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಕಾಲರದಂತಹ ಸಾಂಕ್ರಾಮಿಕ ರೋಗಗಳನ್ನು ಹರಡಬಲ್ಲ ವೈರಾಣುಗಳು ಕಂಡುಬಂದಿದ್ದು ಇದರಿಂದ ಜನರು ಹಲವು ರೋಗಗಳಿಗೆ ತುತ್ತಾಗುತಿದ್ದಾರೆ. ಇದಕ್ಕೆಲ್ಲ ಕಾರಣ ಮನೆಗಳ ಸುತ್ತಲಿನ ಸ್ವಚ್ಛತೆ ಇಲ್ಲದ ಪರಿಸರವೇ ಕಾರಣವಾಗಿದೆ. ಮನೆಯ ಪರಿಸರದಲ್ಲಿ ಕಸ-ಕಡ್ಡಿ, ನಿಂತನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು, ಕುಡಿಯುಲು ಯೋಗ್ಯವಲ್ಲದ ಕಲುಷಿತ ನೀರಿನ ಸೇವನೆ ಮನುಷ್ಯನಿಗೆ ಡೆಂಗ್ಯು, ಕಾಲರ, ಚಿಕುನ್ ಗುನ್ಯದಂತಹ ರೋಗಗಳನ್ನು ತರತ್ತವೆ ಆದ್ದರಿಂದ ಗ್ರಾಮಸ್ಥರು ತಮ್ಮ ತಮ್ಮ ಮನೆಗಳ ಸುತ್ತಲೂ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಚಿತ್ರದುರ್ಗ ಆರೋಗ್ಯ ಇಲಾಖೆ ಹಾಗು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತೀ ಅವಶ್ಯಕ. ಎಂದು ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ.ಅಭಿಪ್ರಾಯ ಪಟ್ಟಿದ್ದಾರೆ.
ದಿನಾಂಕ 21 ಆಗಸ್ಟ್ 20223ರ ಸೋಮವಾರ ಅಂತರಾಷ್ಟ್ರೀಯ ಸೊಳ್ಳೆ ದಿನಾಚರಣೆ ಅಂಗವಾಗಿ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಳಿನಾಕ್ಷಿಯವರ ಸಲಹೆಯ ಮೇರೆಗೆ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿವರ್ಗದವರಿಗಾಗಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಕಾರ್ಯಗಾರದಲ್ಲಿ ತರಬೇತಿ ನೀಡಿ ಮಾತನಾಡಿದ ಯೋಗ ತರಬೇತುದಾರ ರವಿ ಕೆ‌.ಅಂಬೇಕರ್ ಮಾತನಾಡಿ ” ನಿರಂತರವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳ ಕುರಿತಾಗಿ ಜಾಗೃತಿ ಹೊಂದಬೇಕು. ಕಾಲಕ್ಕೆ ಅನುಗುಣವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಮಿತವಾದ ಆಹಾರ ಕ್ರಮ ಬೆಳೆಸಿಕೊಳ್ಳಬೇಕು. ಎಣ್ಣೆ–ಕೊಬ್ಬಿನಂಶದಿಂದ ಕೂಡಿದ ಆಹಾರ ಪದಾರ್ಥಗಳ ಸೇವನೆ ನಿಯಂತ್ರಣದ ಜೊತೆಗೆ ಲಘು ವ್ಯಾಯಾಮ, ಯೋಗ ಅಭ್ಯಾಸ ಮಾಡಬೇಕು. ಎಂದು ಕಿವಿಮಾತು ಹೇಳಿದರು.ಆರೋಗ್ಯ ಕೇಂದ್ರದ ಔಷಧಾಧಿಕಾರಿ ಶಶಿಧರ್ ಕೆ.ಆರ್., ಆರೋಗ್ಯ ಸುರಕ್ಷಷಾಧಿಕಾರಿಗಳಾದ ನಿರ್ಮಲಮ್ಮ, ವೀಣಾ, ನವೀನಲಕ್ಷ್ಮಿ, ಸಮುದಾಯ ಆರೋಗ್ಯಧಿಕಾರಿಗಳಾದ ಮಂಜುಶ್ರೀ, ಆಶಾ ಸುಗಮಕಾರರಾದ ಮಾದೇವಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಪ್ರದರ್ಶಿಸಲಾಯಿತು.

Leave a Reply

Your email address will not be published. Required fields are marked *

error: Content is protected !!