ಉದಯವಾಹಿನಿ ರಾಮನಗರ: ರಾಜ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ ಅವರಷ್ಟು ಕೀಳುಮಟ್ಟದ ರಾಜಕಾರಣ ಮಾಡಿದವರು ಮತ್ತೊಬ್ಬರು ಸಿಗುವುದಿಲ್ಲ ಎಂದು ಮಾಜಿ ಶಾಸಕ ಕೆ.ರಾಜು ಕಿಡಿಕಾರಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್ಡಿಕೆ ಮುಖ್ಯಮಂತ್ರಿಯಾಗಿದ್ದಾಗ ನಡೆದ ವರ್ಗಾವಣೆ ದಂಧೆ ಬೇರೆ ಯಾವ ಸರ್ಕಾರದಲ್ಲಿಯೂ ನಡೆದಿಲ್ಲ. ರಾಮನಗರ ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯ ವರ್ಗಾವಣೆ ವಿಚಾರದಲ್ಲಿ ಹರಾಜು ಕೂಗಿದ ರೀತಿಯಲ್ಲಿ ಹಣ ಫಿಕ್ಸ್ ಮಾಡಿದರು. ಅಂದು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಏಕೆ ಪ್ರಶ್ನಿಸಲಿಲ್ಲ ಎಂದರು.ಕುಮಾರಸ್ವಾಮಿ ಅವರು ಪ್ರಾಮಾಣಿಕರಾಗಿದ್ದರೆ, ಮದಲು ಅವರ ಕುಟುಂಬದ ಆಸ್ತಿಯ ಬಗ್ಗೆ ಜನರ ಮುಂದೆ‌ ಅಂಕಿ ಅಂಶಗಳನ್ನು ನೀಡಲಿ. ಸಮಯಕ್ಕೆ ತಕ್ಕಂತೆ ರಾಜಕಾರಣವನ್ನು ನಡೆಸುವುದೆ ಇವರ ಉದ್ಯೋಗ. ಡಿ.ಕೆ.ಶಿವಕುಮಾರ್ ಅವರು ವ್ಯವಹಾರ ನಡೆಸಿ ಹಣ ಸಂಪಾದಿಸಿದ್ದಾರೆ. ಆದರೆ ನಿಮಗೆ ನೂರಾರು ಕೋಟಿ ಹಣ ಹೇಗೆ ಬಂತು ಎಂಬುದನ್ನು ಲೆಕ್ಕ ನೀಡಿ ಎಂದು ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.ನಗರಸಭೆ ಸದಸ್ಯ ಕೆ.ಶೇಷಾದ್ರಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದ್ದು ಚುನಾವಣಾ ಸಂದರ್ಭದಲ್ಲಿ ನೀಡಿರುವ ಪ್ರಣಾಳಿಕೆಯ ಅಂಶಗಳನ್ನು ಜಾರಿಗೊಳಿಸಲು ಕನಿಷ್ಠ ಆರು ತಿಂಗಳಾದರೂ ಬೇಕು ಆದರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ದ  ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.ಯಾವುದೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ವರ್ಗಾವಣೆ ಸಹಜ‌ ಪ್ರಕ್ರಿಯೆ. ಆದರೆ ಇದನ್ನೆ ದೊಡ್ಡದು ಮಾಡಿ ಆರೋಪಗಳನ್ನು ಮಾಡುತ್ತಿದ್ದಾರೆ. ಅಧಿಕಾರ ಇಲ್ಲದ ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು  ಎಚ್ಡಿಕೆ ಹೇಳುತ್ತಿರುವುದು ಸತ್ಯವಾದರೆ, ಕನಿಷ್ಠ ಐವತ್ತು ಸಾವಿರ ಅಂತರದಲ್ಲಿ ಗೆಲುವು ಸಾಧಿಸಬೇಕಾಗಿತ್ತು ಎಂದರು.ಜೆಡಿಎಸ್ ಪಕ್ಷಕ್ಕೆ ಜನ ಕೇವಲ 19 ಸ್ಥಾನ ನೀಡಿರುವುದರ ಬಗ್ಗೆ ಕುಮಾರಸ್ವಾಮಿ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಧಿಕಾರ ಇದ್ದಾಗ ಅವರು ಕಾರ್ಯಕರ್ತರನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬು‌ದನ್ನು ನೋಡಿ ಜನ ಬೇಸತ್ತಿದ್ದಾರೆ. ಜೆಡಿಎಸ್ ಪಕ್ಷದ ಬ್ಯಾನರ್ ಗಳಲ್ಲಿ ಅವರ ಕುಟುಂಬದ ಸದಸ್ಯರೆ ಇದ್ದಾರೆ. ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರು ಅವರಿಗೆ ಕಾಣುತ್ತಿಲ್ಲವೆ ಎಂದು ಪ್ರಸ್ನಿಸಿದರು.
ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದು, ಸರ್ಕಾರ ವೈಫಲ್ಯಗಳ ವಿರುದ್ದ ಹೋರಾಟ ಮಾಡಲಿ. ಉಳ್ಳವರ ಪರವಾಗಿ ಮಾತನಾಡುವುದನ್ನು  ಮೊದಲು ಬಿಡಬೇಕು ಎಂದರು.
ಮಾಜಿ ಶಾಸಕ ಎ.ಮಂಜು ಅವರು ಇತ್ತೀಚೆಗೆ ಸಂಸದ ಡಿ.ಕೆ.ಸುರೇಶ್ ಅವರ ವಿರುದ್ಧ ನೈಸ್ ರಸ್ತೆ ವಿಚಾರವಾಗಿ ಮಾತನಾಡಿದ್ದಾರೆ. ಮಾಗಡಿ ಮತ್ತು ರಾಮನಗರದಲ್ಲಿ ಸ್ಮಾರ್ಟ್ ಕಾರ್ಡ್ ನೀಡಿ  ಮತ ಪಡೆದಿದ್ದಾರೆ ಎಂದು ಹೇಳುವ ಮೂಲಕ ಮತದಾರರಿಗೆ ಅಪಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ.ರಮೇಶ್, ತಮ್ಮಾಜಿ,  ಬಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಯರೇಹಳ್ಮಂಳಿ ಮಂಜು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಗಾಣಕಲ್ ನಟರಾಜ್, ಮುಖಂಡರಾದ ಕ್ಯಾಸಪುರ ಮಂಜು, ದೊಡ್ಡಿ ಸುರೇಶ್ ಸೇರಿದಂತೆ ಹಲವು ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!