
ಉದಯವಾಹಿನಿ ತಾಳಿಕೋಟಿ: ಪಟ್ಟಣದ ಮುಸ್ಲಿಂ ಸಮಾಜದ ಪ್ರತಿಷ್ಠಿತ ದಿ. ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಅಂತಿಮ ಕಣದಲ್ಲಿ 31 ಜನ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿಜಯಕುಮಾರ್ ಉತ್ತನಾಳ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆಗಸ್ಟ್ 27ರಂದು ನಡೆಯಲಿರುವ ಬ್ಯಾಂಕಿನ ಚುನಾವಣೆಯಲ್ಲಿ ಒಟ್ಟು ಆಡಳಿತ ಮಂಡಳಿ ಗೆ 13 ಸ್ಥಾನಗಳಿದ್ದು ಇದರಲ್ಲಿ 9 ಸ್ಥಾನ ಸಾಮಾನ್ಯ ಎರಡು ಸ್ಥಾನ ಮಹಿಳಾ ಮೀಸಲು ಹಾಗೂ ಎರಡು ಸ್ಥಾನ ಹಿಂದುಳಿದ ವರ್ಗ ಅ ಗೆ ಮೀಸಲಾಗಿದೆ. ಒಟ್ಟು 13 ಸ್ಥಾನಕ್ಕೆ 32 ನಾಮಪತ್ರಗಳು ಸಲ್ಲಿಕೆ ಯಾಗಿದ್ದವು ಆಗಸ್ಟ್ 21 ನಾಮಪತ್ರ ಹಿಂಪಡೆಯುವ ದಿನವಾಗಿರುವುದರಿಂದ ಇದರಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ ಅಂತಿಮ ಕಣದಲ್ಲಿ 31 ಜನ ಉಮೇದು ವಾರರು ಉಳಿದುಕೊಂಡರು ಎಲ್ಲ 31 ಜನ ಉಮೇದುವಾರರಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಯಿತು. ಸದರಿ ಬ್ಯಾಂಕಿಗೆ ಆಗಸ್ಟ್ 27 ರಂದು ಚುನಾವಣೆ ನಡೆಯಲಿದ್ದು ಅಂದೆ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು. ಈ ಸಮಯದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಆರ್.ಬಿ. ದಮ್ಮೂರ ಮಠ. ಬ್ಯಾಂಕಿನ ವ್ಯವಸ್ಥಾಪಕ ಎನ್.ಎ.ಖಾಜಿ. ಸಹಾಯಕ ವ್ಯವಸ್ಥಾಪಕ ಆಯ್. ಆರ್. ಆರಬೋಳ.ಎಲ್.ಆರ್.ನಾಗೂರ.ಹಾಗೂ ಸಿಬ್ಬಂದಿ ವರ್ಗ ಇದ್ದರು
