ಉದಯವಾಹಿನಿ ತಾಳಿಕೋಟಿ : ಮಾನವ ಬಂದುತ್ವ ವೇದಿಕೆ ತಾಲೂಕು ಘಟಕ ಹಾಗೂ ವಿವಿಧ ದಲಿತ ಪರ ಸಂಘಟನೆ ವತಿಯಿಂದ ಬಸವ ಪಂಚಮಿ ನಿಮಿತ್ಯ ಅಂಬೇಡ್ಕರ್ ನಗರದ ಬಡ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು, ಈ ಸಂದರ್ಭದಲ್ಲಿ, ತಾಳಿಕೋಟಿ ತಾಲೂಕು ಮಾನವ ಬಂಧುತ್ವ ಅಧ್ಯಕ್ಷರಾದ ಶ್ರೀ ಕಾಶಿನಾಥ್ ಕಟ್ಟಿಮನಿ ಅವರು, ಕಲ್ಲ ನಾಗರ ಕಂಡರೆ ಹಾಲನರೆ ಎಂಬುರು, ದಿಟ್ಟದ ನಾಗರ ಕಂಡರೆ ಕೊಲ್ಲೇಂಬರಯ್ಯ, ಉಂಬ ಜಂಗಮ ಬಂದರೆ ನಡೆ ಎಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ! ನಮ್ಮ ಕೂಡಲ ಸಂಗನ ಶರಣರ ಕಂಡು, ಉದಾಸೀನವ ಮಾಡಿದರೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ, ಇದೇ ಆಗಸ್ಟ್ ತಿಂಗಳು 21ನೇ ದಿನಾಂಕದಂದು ನಾಗರ ಪಂಚಮಿ ಹಬ್ಬದ ಆಚರಣೆ ಜರುಗಲಿದ್ದು ಆ ದಿನದ ನಾಡಿನ ಶ್ರದ್ಧಾವಂತ  ಜನರು ನಾಗರಹುತಕ್ಕೆ ಮತ್ತು ನಾಗರ ಪ್ರತಿಮೆಗಳಿಗೆ ಹಾಲು ಎರಿಯವ ಸಂಪ್ರದಾಯವಿದೆ, ಆದರೆ ಹಾವು ಮಾಂಸಾಹಾರಿ ಸರಿಸೃಪ ಹಾಲು ಅದರ ಆಹಾರವಲ್ಲ ಮತ್ತು ಹುತ್ತಕ್ಕೆ ಹಾಲು ಎರೆಯವ ದರಿಂದ ಹಾವಿಗೆ ಪ್ರಯೋಜನಕ್ಕಿಂತ ಹಾನಿಯೇ ಹೆಜ್ಜೆಂದು  ವೈಜ್ಞಾನಿಕವಾಗಿ ಸಾಬೀತಾಗಿದೆ, ಕರ್ನಾಟಕದಲ್ಲಿ ಪ್ರತಿ ವರ್ಷ 40,000 ಕ್ಕಿಂತ ಹೆಚ್ಚು ಮಕ್ಕಳು ಅ ಪೌಷ್ಟಿಕತೆಯಿಂದ  ಇಂದ ಮರಣ ಹೊಂದುತ್ತವೆ,ಅವೈಜ್ಞಾನಿಕವಾಗಿ  ಆಚರಿಸಲ್ಪಡುವ ಹಬ್ಬದ ಕಾರಣದಿಂದಾಗಿ   ಕೋಟ್ಯಾಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ, ಇದರ ಬದಲಾಗಿ ಅದೇ ಹಾಲನ್ನು ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ನೀಡುವುದರ ಮೂಲಕ ವ್ಯರ್ಥವಾಗುತ್ತಿರುವ ಪೌಷ್ಟಿಕ ಆಹಾರ ಪೋಲಾಗುವುದನ್ನು ತಪ್ಪಿಸಬಹುದು, ಆಹಾರದ ನಷ್ಟ ದೇಶದ ನಷ್ಟವೆಂದು ಅರಿಯಬೇಕಾಗಿದೆ ಮಾನವ ಬಂಧುತ್ವ ವೇದಿಕೆಯಿಂದ ಇಡೀ ರಾಜ್ಯದ್ಯಂತ. ನಮ್ಮ ಕಾರ್ಯಕರ್ತರು ದಿನಾಂಕ್ 21ರಂದು ಹುತ್ತಕ್ಕೆ ಹಾಲು ಎರಿಯುವ ಬದಲಾಗಿ ತಮ್ಮ ತಮ್ಮ ಮನೆಗಳಲ್ಲಿ ಸುತ್ತಮುತ್ತಲಿನ ಬಡ ಮಕ್ಕಳಿಗೆ ಮತ್ತು ರೋಗಿಗಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು,  ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟ ಸಂಚಾಲಕರಾದ ಶ್ರೀ ನಾಗೇಶ್ ಕಟ್ಟಿಮನಿ. ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಮಹೇಶ್ ಚಲವಾದಿ, ಸಾಮಾಜಿಕ ಕಾರ್ಯಕರ್ತರಾದ ಸಿದ್ಧಾರ್ಥ ಕಟ್ಟಿಮನಿ, ಸಂಜೀವ್ ಕಟ್ಟಿಮನಿ. ಮಲ್ಲು ಕಟ್ಟಿಮನಿ ಬಸವರಾಜ್ ರಕ್ಕಸಗಿ ಹಾಗೂ ಇನ್ನಿತರ ಕಾರ್ಯಕರ್ತರ ಮತ್ತು ಮಕ್ಕಳೊಂದಿಗೆ ಹಾಲು ವಿತರಣೆ ಮಾಡಲಾಯಿತು

Leave a Reply

Your email address will not be published. Required fields are marked *

error: Content is protected !!