ಉದಯವಾಹಿನಿ ಶಿಡ್ಲಘಟ್ಟ: ಬೀದಿ ಬದಿ ಹಣ್ಣು ಹಂಪಲು ತರಕಾರಿ ಹಾಗೂ ಇನ್ನಿತರೆ ವ್ಯಾಪಾರ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದು, ಅವರ ಜೀವನ ಮತ್ತಷ್ಟು ಉದ್ಭವಿಸಲಿ ಎಂದು ಸಮಾಜ ಸೇವಕ ಎಸ್ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.ತಾಲೂಕಿನ ಜಂಗಮಕೋಟೆ ಕ್ರಾಸ್ ಬಳಿ ಆಂಜಿನಪ್ಪ ಪುಟ್ಟು ಅವರ ಅಭಿಮಾನಿ ಬಳಗದವರು ತಮ್ಮ 46ನೇ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಶುಭ ಕೋರಿದ ನಂತರ ಅವರು ಮಾತನಾಡಿದರು.ಜಂಗಮಕೋಟೆ ಕ್ರಾಸ್ ಬಳಿಯ ಬೀದಿ ಬದಿ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿಕೊಂಡು ತಮ್ಮ ಜೀವನ ರೂಸಿಕೊಳ್ಳಲಿ ಎಂದು ಈ ಭಾಗದ 10 ಜನರಿಗೆ ಪ್ರೋತ್ಸಾಹ ದನವನ್ನು ನೀಡಿದ್ದೇವೆ. ಹಾಗೇಯೆ ಕಳೆದ ಚುನಾವಣೆಯಲ್ಲಿ ಶಾಸಕನಾಗಿ ಹಲವಾರು ರೀತಿಯಾಗಿ ನಿಮ್ಮ ಸೇವೆ ಮಾಡ ಬೇಕೆಂದು ಹೋರಾಟ ಮಾಡಿದ್ದೆ, ಆದರೆ ಕಾರಣಾಂತರಗಳಿಂದ ನಿಮ್ಮ ಆಶೀರ್ವಾದ ಬೇರೆಯವರಿಗೆ ಸಿಕ್ಕಿದೆ. ಅವರು ಉತ್ತಮ ಕೆಲಸಗಳನ್ನ ಮಾಡಲಿ, ನಮ್ಮ ಸೇವೆ ಹೀಗೆ ಮುಂದುವರಿಯುತ್ತದೆ. ಈ ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ತಮಗೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.ಜಂಗಮಕೋಟೆ ಹೋಬಳಿಯ ಅಭಿಮಾನಿಗಳು ಆಂಜಿನಪ್ಪ ಪುಟ್ಟು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ, ಅವರಿಗೆ ಆರೋಗ್ಯ ಐಶ್ವರ್ಯ ನೆಮ್ಮದಿ ಹಾಗೂ ಒಳ್ಳೆಯ ರಾಜಕೀಯ ಭವಿಷ್ಯ ಸಿಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಮೇಶ್ ಕಳನಾಯಕನಹಳ್ಳಿ,ಶಶಿಕುಮಾರ್ ಹೊಸಪೇಟೆ,ಎನ್ ಎಂ ರಾಜು ಬಳುವನಹಳ್ಳಿ,ನರಸಿಂಹಮೂರ್ತಿ ಬಳುವನಹಳ್ಳಿ, ಪ್ರಮೋದ್,ಗಿರೀಶ್, ಆನಂದ್, ವಿಶ್ವನಾಥ್ ಬ್ಲಾಕಿ, ವಿನೋದ್, ಹಾಗೂ ಸುತ್ತಮುತ್ತಲಿನ ಅಭಿಮಾನಿಗಳು ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!