
ಉದಯವಾಹಿನಿ ಕೊಲ್ಹಾರ: ಆಗಸ್ಟ್ 28 ಸೋಮವಾರ ರಂದು ಪಟ್ಟಣದ ಜಗದ್ಗುರು ಶ್ರೀ ರೇಣುಕಾಚಾರ್ಯ ಸೌಹಾರ್ದ ಸಹಕಾರಿ ಬ್ಯಾಂಕಿನ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸರ್ವಸಾಧಾರಣ ಸಭೆಯ ಸಭೆಯ ಅಂಗವಾಗಿ ಮುಂಜಾನೆ 7 ಗಂಟೆಯಿಂದ 10.00 ಗಂಟೆಯವರೆಗೆ ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ ಹಾಗೂ ಶಿವ ಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಸಿ.ಎಂ. ಗಣಕುಮಾರಮಠ ಹೇಳಿದರು.
ರವಿವಾರ ಪಟ್ಟಣದ ಜಗದ್ಗುರು ಶ್ರೀ ರೇಣುಕಾಚಾರ್ಯ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಸಹಕಾರಿ ಸಂಘ ಪ್ರಾರಂಭಗೊಂಡು ಐದು ವರ್ಷ ಪೂರೈಸಿದ ಪ್ರಯುಕ್ತ ವಾರ್ಷಿಕೋತ್ಸವ ಹಾಗೂ ಸರ್ವ ಸಾಧಾರಣ ಸಭೆಯ ಅಂಗವಾಗಿ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಶಿವಭಕ್ತರಿಗೆ ಲಿಂಗ ದೀಕ್ಷೆ ಕಾರ್ಯಕ್ರಮವನ್ನು ಇದೆ ತಿಂಗಳು ಆ. 28 ಸೋಮವಾರದಂದು ಬೆಳಗ್ಗೆ 7.00 ಯಿಂದ 10.00 ವರೆಗೆ ಹಮ್ಮಿಕೊಳ್ಳಲಾಗಿದ್ದು.
ಕಾರ್ಯಕ್ರಮವು ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಸತಿಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಮಹಾಸ್ವಾಮಿಗಳು, ಕೊಲ್ಹಾರ ಮತ್ತು ಬೀದರ ಜಿಲ್ಲೆ ಹುಣಸೂರು ತಾಲೂಕಿನ ಬೇಲೂರು ಕಟ್ಟಿಮನಿ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಕೊನ್ನೂರು ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು, ಚಿಮ್ಮಲಗಿಯ ಅರಳೆಲೆ ಹಿರೇಮಠದ ಸಿದ್ಧರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದ್ದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಜಮಖಂಡಿ ಕ್ಷೇತ್ರದ ಶಾಸಕ ಜಗದೀಶ್ ಗುಡುಗುಂಟಿ ಉದ್ಘಾಟಿಸಲಿದ್ದು ಅತಿಥಿಗಳಾಗಿ ಪಡೆದಯ್ಯ ಹಿರೇಮಠ, ವೈಜನಾಥ ಕರ್ಪುರಮಠ, ಎಸ್.ಎಸ್ ಗೊಳಸಂಗಿಮಠ, ಅಣವೀರಯ್ಯ ಪ್ಯಾಠಿಮಠ, ಶಂಕರಯ್ಯ ಚಿಕ್ಕಮಠ, ಆರ್.ಬಿ ಗಣಕುಮಾರ, ಡಾ.ಶೀವಲಿಂಗ ಶರಣರು, ಬಿ.ಎಸ್ ಹಂಗರಗಿ ಇತರರು ಇರುವರು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ರಾಚಯ್ಯ ಗಣಕುಮಾರ್ ರಾಜಶೇಖರಯ್ಯ ಹಿರೇಮಠ ಬಸಯ್ಯ ಗಣಾಚಾರಿ ಶಾಂತ ಸ್ವಾಮಿ ಹಿರೇಮಠ ಜಿ ಕೆ ಪರಡಿಮಠ ಸಂಗಯ್ಯ ಚಿಕ್ಕಮಠ ರುದ್ರಯ್ಯ ಮಠಪತಿ ಬ್ಯಾಂಕ್ ಸಿಬ್ಬಂದಿ ಭೀಮಸಿ ಜಮ್ಮನಕಟ್ಟಿ ಕುಮಾರ್ ಹಿರೇಮಠ ಸಾಗರ್ ಜಲಗೇರಿ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೆಸರು ನೊಂದಾಯಿಸಲು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
9008692092, 9972639298, 6363534486, 9448245557
