
ಉದಯವಾಹಿನಿ ಸಿಂಧನೂರು: ನಗರದಲ್ಲಿ ಪುತ ಪಾತ ಅತಿಕ್ರಮಣ ಮಾಡಿಕೊಂಡ ಕಾರಣ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಇಂದು ತುಂಬಾ ತೊಂದರೆಯಾಗಿದೆ. ಬೀದಿಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆ 2014ನ್ನು ಉಲ್ಲಂಘಿಸಿದ ಸ್ಠಳೀಯ ಆಡಳಿತದ ವಿರುದ್ಧ ಹೋರಾಡುವುದರೊಂದಿಗೆ, ನಮ್ಮ ಮೂಲ ಹಕ್ಕುಗಳನ್ನು ಪಡೆಯಲು ಸಂಘ ಶ್ರಮಿಸಬೇಕೆಂದು. ಶ್ರಮ ಜೀವಿ ಬೀದಿ ಬದಿ ವ್ಯಾಪಾರಿಗಳ ಸಂಘ (ಟಿಯುಸಿಐ) ತಾಲುಕಾ ಸಮಿತಿ ನೂತನ ಗೌರವಾಧ್ಯಕ್ಷರಾದ ಎಂ, ಗಂಗಾಧರ ಮಾತನಾಡಿದರು.
ನಗರದ ಹಣ್ಣು ವ್ಯಾಪಾರ ಮಾರುಕಟ್ಟೆ ಆವರಣದಲ್ಲಿ ಇಂದು ನೂತನ ಸಂಘ ಉದ್ಘಾಟಿಸಿ ಮಾತನಾಡಿದ ಅವರು ನಗರದ ಪುಟಪಾತ ರಸ್ತೆಯನ್ನು ಕಿರಾಣಿ ಅಂಗಡಿ, ಹೋಟೆಲ್, ಬಟ್ಟೆ ಅಂಗಡಿ,ಗೊಬ್ಬರ ಅಂಗಡಿ ಮಾಲೀಕರು ಸೇರಿದಂತೆ ಇನ್ನಿತರರು ಅತಿಕ್ರಮಣ ಮಾಡಿಕೊಂಡ ಕಾರಣ ಬೀದಿ ಬದಿಯ ವ್ಯಾಪಾರಿಗಳು ಪುಟಪಾತ ಇಲ್ಲದೆ ಇರುವುದರಿಂದ ಅನಿವಾರ್ಯ ವಾಗಿ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುವ ಪರಿಸ್ಥಿತಿ ಒದಗಿ ಬಂದಿದೆ ಎಂದರು.
ನಗರದಲ್ಲಿ ಖಾಲಿ ಇದ್ದ ಜಾಗದಲ್ಲಿ ಬೀದಿಬದಿ ವ್ಯಾಪಾರಿಗಳು ಬೀದಿ ಬದಿಯ ವ್ಯಾಪಾರ ಮಾಡಲು ಅವಕಾಶ ಇದೆ ಬೀದಿಯೆ ಅವರಿಗೆ ಮಾರುಕಟ್ಟೆ, ಅದೆ ಅವರಿಗೆ ಸ್ವರ್ಗ ಇದ್ದಂತೆ ಸಂಚಾರಕ್ಕೆ ತೊಂದರೆಯಾಗದಂತೆ ಕಾನೂನಿನ ಪ್ರಕಾರ ಹಾಗೂ ಸಂವಿಧಾನ ಪ್ರಕಾರ ವ್ಯಾಪಾರ ಮಾಡುವ ಮೂಲಕ ಇತರರಂತೆ ನೀವು ಸಹ ಆರ್ಥಿಕವಾಗಿ ಮುಂದೆ ಬಂದು ನಿಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎಂದು ಪುಟಪಾತ ವ್ಯಾಪಾರಿಗಳಿಗೆ ಕಿವಿ ಮಾತು ಹೇಳಿದರು. ಬೀದಿಬದಿಯಲ್ಲಿ ಜಾಗ ಇದ್ದರೆ ಅಲ್ಲಿ ವ್ಯಾಪಾರ ಮಾಡುಲು ಬೀದಿಬದಿ ಸಂಸ್ಕರಣ ಕಾಯ್ದೆ ಇದೆ. ಕಾಯ್ದೆಯು ಸಂಪೂರ್ಣ ಜಾರಿಯಾಗಲು ಎಲ್ಲರು ಹೋರಾಟ ಮಾಡಿ ನಮ್ಮ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಕೊಳ್ಳುವ ಜೊತೆಗೆ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿ ಕೊಳ್ಳೋಣ ಪುಟಪಾತ ಅತಿಕ್ರಮಣ ಮಾಡಿಕೊಂಡ ಜಾಗ ತೆರವು ಗೊಳಿಸಿ ಬೀದಿಬದಿಯ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವಂತೆ ಸಂಘದ ವತಿಯಿಂದ ನಗರ ಸಭೆ ಹಾಗೂ ಪೋಲಿಸ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳೋಣ. ಬೇಡಿಕೆ ಈಡೇರಿಸದಿದ್ಧರೆ ಸಂಘದ ವತಿಯಿಂದ ಒಂದಾಗಿ ಹೋರಾಟ ಮಾಡೋಣ ಎಂದರು.
ಬೀದಿಬದಿಯ ವ್ಯಾಪಾರಿಗಳ ಅನುಕೂಲಕ್ಕಾಗಿ ಬೀದಿಬದಿಯ ಸಂರಕ್ಷಣಾ ಕಾನೂನು ಇದೆ ಕಾನೂನಿನ ಪ್ರಕಾರ ನಗರದಲ್ಲಿ ಖಾಲಿ ಇರುವ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಿ ನಿಮ್ಮ ನ್ಯಾಯಯುತ ಹೋರಾಟ ಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಂಘದ ಕಾನೂನು ಸಲಹೆಗಾರ ಚಿದಾನಂದಪ್ಪ ವಕೀಲರು ಮಾತನಾಡಿದರು.
ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ದುರಗಪ್ಪ ಕಾರಲ ಕುಂಟಿ ಶ್ರಮಜೀವಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ ಮುದಿಯಪ್ಪ, ಶ್ರಮಜೀವಿ ಬೀದಿಬದಿ ವ್ಯಾಪಾರಿ ಸಂಘದ ಪದಾಧಿಕಾರಿಗಳಾದ, ಸೋಮಶೇಖರ ಅಬ್ದುಲ್ ಸಾಬ, ಹುಸೇನಸಾಬ, ರಹಿಂಸಾಬ ,ಕಲಂದರ,ಭಾಷಾಸಾಬ, ನಾಸೀರಸಾಬ, ಸೈಯದ ಅನ್ವರ ,ರಾಜಮ್ಮ, ಅಮರೇಶ ರಾಠೋಡ, ಅಬ್ದುಲ್ ಸೇರಿದಂತೆ ನೂರಾರು ಬೀದಿಬದಿ ವ್ಯಾಪಾರಿಗಳು ಮಹಿಳೆಯರು ಮತ್ತು ಇತರರು ಕಾರ್ಯ ಕ್ರಮದಲ್ಲಿ ಹಾಜರಿದ್ದರು.
