ಉದಯವಾಹಿನಿ, ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ನಂ.೬೪ ಹಳೆಕೋಟೆ ಗ್ರಾಮದ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿರುವ ಎಲ್ಲಾ ಕ್ರಷರ್‌ಗಳ ಸ್ಪೋಟ ಮತ್ತು ಕಾರ್ಯ ಚಟುವಟಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಗ್ರೇಡ್-೨ ತಹಶೀಲ್ದಾರ್ ರತ್ಮಮ್ಮ ಅವರ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಕೆ.ಆರ್.ಎಸ್. ಪಕ್ಷದ ಮುಖಂಡ ಟಿ.ಯಲ್ಲಪ್ಪ ಮಾತನಾಡಿ ಹಳೆಕೋಟೆ ಗ್ರಾಮದಲ್ಲಿನ ಗುಡ್ಡಗಳಲ್ಲಿ ರಾಸಾಯನಿಕ ವಸ್ತುಗಳಿಂದ ಕ್ರಷರ್‌ಗಳು ನಡೆಸುವ ಸ್ಪೋಟದಿಂದಾಗಿ ವಾತಾವರಣ ವಿಷಯುಕ್ತವಾದ ಕೆಟ್ಟ ಗಾಳಿಯಿಂದಾಗಿ ಗ್ರಾಮಸ್ಥರಿಗೆ ದಮ್ಮು, ಕೆಮ್ಮು, ಆಯಾಸದಿಂದ ಬಳಲುತ್ತಿದ್ದಾರೆ. ಸಾರ್ವಜನಿಕರ, ಜಾನುವಾರುಗಳ ಸಹಿತ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದೆ. ಭಯಾನಕ ಸ್ಪೋಟದಿಂದಾಗಿ ಮನೆಗಳು ಬಿರುಕು ಬಿಟ್ಟಿವೆ. ರೈತರು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಜಮೀನಿನಲ್ಲಿ ಕೆಲಸ ಮಾಡುವ ಅನಿವಾರ್ಯತೆಯಿದೆಂದರು.ಗ್ರಾ.ಪಂ. ಅಧ್ಯಕ್ಷ ಕೆ.ವೀರೇಶ ಮಾತನಾಡಿ ಈ ಬಗ್ಗೆ ಸಂಬ0ದಿಸಿದ ಎಲ್ಲಾ ಇಲಾಖೆಗಳಿಗೂ ಮನವಿ ಸಲ್ಲಿಸಿದರೂ ನಿಷ್ಪçಯೋಜಕವಾಗಿದೆಂದರು. ಈ ದು:ಸ್ಥಿತಿಗೆ ಕಾರಣವಾಗಿರುವ ಎಲ್ಲಾ ಕ್ರಷರ್‌ಗಳನ್ನು ಕೂಡಲೇ ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದರು.
ಬಿ.ಎಸ್.ಪಿ ಪಕ್ಷದ ಮುಖಂಡ ಮುನಿಸ್ವಾಮಿ ಮಾತನಾಡಿ ರೈತರ ಕಾರ್ಯಚಟುವಟಿಕೆಗಳಿಗೆಂದು ಕಾಲುವೆಯ ಎರಡು ಬದಿಯಲ್ಲಿ ನಿರ್ಮಿಸಿರುವ ಕಾಲುವೆಯ ರಸ್ತೆಯ ಮೇಲೆ ಕಲ್ಲು ಗಣಿಗಾರಿಕೆಯ ಬೃಹತ್ ವಾಹನಗಳಿಂದ ಕಾಲುವೆಗೆ ಧಕ್ಕೆಯಾಗುತ್ತಿದ್ದರೂ ಸಂಬAದಿಸಿದ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು.ಇದೇ ವೇಳೆ ಗ್ರಾಮಸ್ಥರಾದ ಹೆಚ್.ವೀರೇಶಪ್ಪ, ಕಾಳಿಂಗ, ತಿಮ್ಮಪ್ಪ, ನಂದೀಶ, ಕಾಳಪ್ಪ, ಬಸಪ್ಪ, ಹೆಚ್.ಗಾಳೆಪ್ಪ, ಮಲ್ಲಯ್ಯ, ಹೆಚ್.ಮಾರೆಪ್ಪ, ಟಿ.ಹನುಮಂತ, ನಾಗಪ್ಪ, ವೀರಭದ್ರ, ಹಾಗೂ ಇನ್ನಿತರರು ಇದ್ದರು.
