ಉದಯವಾಹಿನಿ, ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಸೇರಿದಂತೆ ಅಲ್ಲಿನ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ವಿಧಾನಸಭೆ ಅಧಿವೇಶನ ಕರೆಯುವಂತೆ ಸರ್ಕಾರ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದೂ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಟೀಕೆಗೆ ಗುರಿಯಾಗಿದೆ.
ರಾಜ್ಯ ಸಚಿವ ಸಂಪುಟ ಆಗಸ್ಟ್ ೪ ರಂದು ಅಧಿವೇಶನ ಕರೆಯಲು ರಾಜ್ಯಪಾಲರಿಗೆ ತನ್ನ ಶಿಫಾರಸ್ಸು ಕಳುಹಿಸಿದೆ. ೬ ತಿಂಗಳಿಗೂ ಹೆಚ್ಚಿಲ್ಲದ ಅಂತರದ ಸಾಂವಿಧಾನಿಕ ಷರತ್ತುಗಳನ್ನು ಉಲ್ಲಂಘಿಸುವುದನ್ನು ತಪ್ಪಿಸಲು ಸೆಪ್ಟೆಂಬರ್ ೨ ರೊಳಗೆ ತುರ್ತು ಅಧಿವೇಶನ ಕರೆಯುವುದು ಈಗ ಸರ್ಕಾರಕ್ಕೆ ಇರುವ ಏಕೈಕ ಆಯ್ಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರ ಅಧಿವೇಶನ ನಡೆಸುವ ಸಂಬಂಧ ನಡೆದ ಸಭೆಯಲ್ಲಿಯೂ ಈ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಅಲ್ಲದೆ ಅಧಿವೇಶನ ಕರೆಯುವ ಕುರಿತು ರಾಜ್ಯಪಾಲರಾದ ಅನುಸೂಯೆ ಊಯಿಕೆ ಅವರಿಂದ ಪ್ರತಿಕ್ರಿಯೆ ದೊರೆತಿಲ್ಲ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಅವರು ಬಿಜೆಪಿ ನೇತೃತ್ವದ ಎನ್ ಬಿರೇನ್ ಸಿಂಗ್ ಸರ್ಕಾರ ಸೆಪ್ಟೆಂಬರ್ ೨ ರೊಳಗೆ ಸದನ ಕರೆಯುವ ಸಾಂವಿಧಾನಿಕ ಹೊಣೆಗಾರಿಕೆ ಪೂರೈಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!