ಉದಯವಾಹಿನಿ, ಚಿನ್ನೈ: ತಮಿಳು ಚಿತ್ರರಂಗದ ಮೇರುನಟ ಸ್ಟಾರ್ ರಜನಿಕಾಂತ್ ಪ್ರಸ್ತುತ ಉತ್ತರ ಪ್ರದೇಶ ಪ್ರವಾಸದಲ್ಲಿದ್ದಾರೆ .
ಪ್ರವಾಸದಂಗವಾಗಿ ರಜನಿಕಾಂತ್ ಅವರು ಲಕ್ನೋ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದೆ. ರಜನಿ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ. ೭೨ ವರ್ಷದ ವ್ಯಕ್ತಿ ೫೧ ವರ್ಷದ ವ್ಯಕ್ತಿಯ ಕಾಲಿಗೆ ನಮಸ್ಕರಿಸಬೇಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ. ಈ ಘಟನೆ ಬಗ್ಗೆ ರಜನಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ವಯಸ್ಸಿನವರಾಗಿರಲಿ, ಸನ್ಯಾಸಿ ಅಥವಾ ಯೋಗಿಯ ಕಾಲಿಗೆ ಬೀಳುವುದು ನನ್ನ ಅಭ್ಯಾಸ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಎಂದು ಹೇಳಿ ಒಂದೇ ಸಾಲಿನಲ್ಲಿ ಸ್ಪಷ್ಟನೆ ನೀಡಿ ಈ ವಿವಾದಕ್ಕೆ ಅಂತ್ಯ ಹಾಡಿದರು.
೨೦೨೪ರ ಚುನಾವಣೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಶ್ನೆ ಎದುರಾದಾಗ, ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಇತ್ತೀಚಿನ ಚಿತ್ರ ‘ಜೈಲರ್’ಗೆ ಬೆಂಬಲ ನೀಡಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!