ಉದಯವಾಹಿನಿ, ಬಿನ್ನಬರಿ (ಅಸ್ಸಾಂ): ಅಸ್ಸಾಂನ ಸಾಸಿವೆ ಹೊಲದಲ್ಲಿ ಜೇನು ಸಾಕಾಣೆಯ ಚಟುವಟಿಕೆಗೆಳು ಗರಿಗೆದರಿವೆ. ಮುಂಜಾನೆಯೇ ಏಳುವ ಸಾಕಾಣಿಕೆದಾರರು ಇಡೀ ದಿನ ಈ ಜೇನುನೋಣಗಳ ಪರಿಶೀಲನೆಯಲ್ಲಿ ತೊಡಗುತ್ತಾರೆ. ಈ ಮೂಲಕ ಗಾಢ ಹೊನ್ನಿನ ಬಣ್ಣದ ಜೇನುಗಳನ್ನು ಸಂಗ್ರಹಿಸಿ ವಿದೇಶಗಳಿಗೂ ಮಾರಾಟ ಮಾಡುತ್ತಾರೆ.
ಜೇನು ಸಾಗಣಿಕೆಯ ಈ ಉದ್ಯೋಗ ಸದ್ಯ ಬಾರಿ ಬೇಡಿಕೆ ಪಡೆದುಕೊಂಡಿದೆ. ಬೆಳಗಿನ ಹೊತ್ತು ಜೇನು ಸಾಗಣಿಕೆ, ಹೊಗೆಯಂತಹ ಚಟುವಟಿಕೆಯಲ್ಲಿ ತೊಡಗುವ ಈ ಕಾರ್ಮಿಕರು ರಾತ್ರಿಯಲ್ಲಿ ನೀಲಿ ಟಾರ್ಪಾಲ್‌ಗಳ ಅಡಿ ನೆಲೆಸುತ್ತಾರೆ. ಜೇನುಗಳಿರುವ ಮರದ ಜೇನುನೊಣ ಪೆಟ್ಟಿಗೆಗಳ ಮೂಲಕ ಜೇನು ಸಂಗ್ರಹಿಸುವ ಸಂಪೂರ್ಣ ಕೆಲಸದಲ್ಲಿ ಭಾಗಿಯಾಗುವುದಕ್ಕಾಗಿ ಅವರು ತಮ್ಮ ಕುಟುಂಬವನ್ನು ಹಲವು ತಿಂಗಳುಗಳ ಕಾಲ ತೊರೆದು ಜೀವನೋಪಾಯದ ಮಾರ್ಗವನ್ನು ಕಂಡುಕೊಳ್ಳುತ್ತಾರೆ.
ಈ ಕುರಿತು ಮಾತನಾಡಿರುವ ಜೇನು ಸಾಗಾಣಿಕೆದಾರರು, ಇದರಿಂದ ಆದಾಯ ಗಳಿಸುತ್ತಿರುವುದರಿಂದ ಈ ಉದ್ಯಮದಲ್ಲಿ ತೊಡಗಿರುವುದಾಗಿ ಹೇಳಿದ್ದಾರೆ. ಜೇನು ಸಂಗ್ರಹಕ್ಕಾಗಿ ಹೂಗಳು ಅರಳಿದ ನಂತರ, ಪರಾಗಸ್ಪರ್ಶ ಮತ್ತು ಜೇನುತುಪ್ಪವನ್ನು ಸಂಗ್ರಹಿಸಲು ರೈತರಿಗೆ ಸಹಾಯ ಮಾಡಲು ವಲಸೆ ಜೇನುಸಾಕಣೆದಾರರು ದಶಕಗಳಿಂದ ತಮ್ಮ ಜೇನುನೊಣಗಳ ವಸಾಹತುಗಳನ್ನು ಹೊಲದಿಂದ ಹೊಲಕ್ಕೆ ಸ್ಥಳಾಂತರಿಸುತ್ತಿದ್ದಾರೆ.

ಅಸ್ಸಾಂನಲ್ಲಿ ಈ ಅಭ್ಯಾಸವೂ ಹೊಸದಾಗಿ ಬೆಳೆಯುತ್ತಿದೆ. ಸ್ಥಳೀಯರು ಮತ್ತು ವಲಸೆ ಜೇನುಸಾಗಾಣಿಕೆದಾರರು ಜೇನುಗಳ ಬೇಡಿಕೆ ಹೆಚ್ಚಳದ ಹಿನ್ನಲೆ ರೈತರು ಮತ್ತು ಕೃಷಿಕರ ನಡುವೆ ಬೆಂಬಲಗಳು ಹೆಚ್ಚುತ್ತಿವೆ. ಆದರೆ, ಹವಾಮಾನ ಬದಲಾವಣೆ ಇದಕ್ಕೆಲ್ಲ ದೊಡ್ಡ ತೊಡಕಾಗಿದೆ. ಪ್ರವಾಹ, ಅಧಿಕ ಮಳೆಗಾಲ, ಉರಿ ಬಿಸಿಲು ಹಾಗೇ ಬದಲಾಗುತ್ತಿರುವ ಭೂ ಸದೃಶ್ಯಗಳು ಕೂಡ ಜೇನುಸಾಗಣಿಕೆದಾರರಿಗೆ ಸವಾಲಾಗಿ ಪರಿಣಮಿಸಿದೆ.
ಹವಾಮಾನ ಉತ್ತಮವಾಗಿದ್ದಲ್ಲಿ, ಉತ್ಪಾದನೆ ಚೆನ್ನಾಗಿರುತ್ತದೆ. ಹವಾಮಾನ ಕೊಂಚ ಹದಗೆಟ್ಟರೂ, ಯಾವುದೇ ಉತ್ಪಾದನೆ ಇಲ್ಲ. ಹವಾಮಾನಗಳು ಹೆಚ್ಚಿನ ಪರಿಣಾಮ ಬೀರುವ ಹಿನ್ನೆಲೆ ಅದು ಉತ್ತಮವಾಗಿರಬೇಕು ಎನ್ನುತ್ತಾರೆ ಮತ್ತೊಬ್ಬ ಜೇನುಸಾಗಾಣಿಕೆದಾರರಾದ ರಂಜಿತ್​ ಕುಮಾರ್​. ಜೇನು ನಡಾವಳಿಕೆ ಮೇಲೆ ಪರಿಣಾಮ ಬೀರುವ ಪ್ರತಿಕೂಲ ಹವಾಮಾನಗಳು: ಅಸ್ಸಾಂ, ಈಶಾನ್ಯ ಬಾಂಗ್ಲಾ ಮತ್ತು ದಕ್ಷಿಣ ಹಿಮಾಲಯದ ನೆರೆಯಲ್ಲಿರುವ ಪ್ರದೇಶವಾಗಿದ್ದು, ಈ ಪ್ರದೇಶವೂ ಹೆಚ್ಚಿನ ಹವಾಮಾನ ಪರಿಸ್ಥಿತಿಗಳಿಂದಾಗಿ ಬದಲಾಗುತ್ತದೆ. ಅಲ್ಲದೇ ಮಾನವ ಹಸ್ತಕ್ಷೇಪದ ಪರಿಣಾಮವಾಗಿ ಪ್ರತಿಕೂಲ ಪರಿಣಾಮದಿಂದ ಅಧಿಕ ಮಳೆಗೂ ಸಾಕ್ಷಿಯಾಗಿದೆ. 2024ರಲ್ಲಿ ಉಂಟಾದ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅನೇಕ ಕೃಷಿ ಭೂಮಿಗಳು ನಾಶವಾದವು. ಇದರಿಂದಾಗಿ ಸ್ಥಳಾಂತರಗಳು ಕೂಡಾ ಹೆಚ್ಚಾಗುತ್ತಿವೆ.

Leave a Reply

Your email address will not be published. Required fields are marked *

error: Content is protected !!