
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ,ಚಿಂಚೋಳಿ ಬ್ಯಾಂಕಿನ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಕ್ಷೇತ್ರದ 14 ಮತಕ್ಷೇತ್ರದ ಸಾಮಾನ್ಯ ಚುನಾವಣೆಯನ್ನು ಸೆಪ್ಟೆಂಬರ್ 03ರಂದ್ದು ಬೆಳಿಗ್ಗೆ 9ರಿಂದ 04ಗಂಟೆಯವರೆಗೆ ಮತದಾನ ಜರುಗಲಿದೆ ಎಂದು ಬ್ಯಾಂಕಿನ ರಿಟರ್ನಿಂಗ್ ಆಫೀಸರ್ ರವೀಂದ್ರ ಹಾಗೂ ವ್ಯವಸ್ಥಾಪಕ ನಾಗಣ್ಣ ಯಲ್ದೆ ತಿಳಿಸಿದ್ದಾರೆ.ಬ್ಯಾಂಕಿನ ಒಟ್ಟು 14ಮತಕ್ಷೇತ್ರಗಳು ಹೊಂದಿದ್ದು ಒಟ್ಟಾರೆ 745 ಮತದಾರರು ಮತ ಚಲಾವಣೆಯ ಹಕ್ಕು ಪಡೆದುಕೊಂಡಿದ್ದಾರೆ.
ಆಕಾಂಕ್ಷೆವುಳ್ಳ ಅಭ್ಯರ್ಥಿಗಳು ಅಗಷ್ಟ್ 19ರಿಂದ 26ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 03ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದು,ನಾಮಪತ್ರ ಪರಿಶೀಲನೆಯನ್ನು ಅಗಷ್ಟ್ 27ರಂದು ಬೆಳಿಗ್ಗೆ 11ಕ್ಕೆ ರಿಟರ್ನಿಂಗ್ ಅಧಿಕಾರಿಯಿಂದ ಪರಿಶೀಲನೆ ಮಾಡಲಾಗುವುದು,ಅಗಷ್ಟ್ 28ರಂದ್ದು ಬೆಳಿಗ್ಗೆ 11ರಿಂದ ಮಧ್ಯಾಹ್ನ 03ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ,4ಗಂಟೆಯ ನಂತರ ಕ್ರಮಬದ್ದವಾಗಿದ್ದ ಪಟ್ಟಿ ಪ್ರಕಟನೆ ಹಾಗೂ ಅಭ್ಯರ್ಥಿಗಳು ಅಪೇಕ್ಷಿಸಿದಲ್ಲಿ ಚಿಹ್ನೆಗಳ ಹಂಚಿಕೆ,ಅ.30ರಂದ್ದು 11ಗಂಟೆಯ ನಂತರ ಚಿಹ್ನೆಯ ಸಹಿತ ಕ್ರಮಬದ್ದವಾಗಿ ಸ್ವರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟನೆ ಮಾಡಲಾಗುವುದು.ಸೆಪ್ಟೆಂಬರ್03ರಂದು ಬೆಳಿಗ್ಗೆ 09ರಿಂದ 04ಗಂಟೆಯ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಾಪೂರದಲ್ಲಿ ಮತದಾನ ಪ್ರಕ್ರಿಯೆ ಜರುಗಲಿದೆ,ಮತದಾನದ ಅವಧಿ ಮುಗಿದ ತಕ್ಷಣ ಮತ ಏಣಿಕೆ ಮಾಡಿ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
14ಮತಕ್ಷೇತ್ರಗಳ ಹೆಸರು ಮತ್ತು ಮೀಸಲಾತಿ ಹಾಗೂ ಸದಸ್ಯರ ಆಯ್ಕೆ ಮತ್ತು ಮತದಾರರು
1) ಐನಾಪೂರ ಸಾಲಗಾರರ ಮತಕ್ಷೇತ್ರವು ಸಾಮಾನ್ಯ ಮೀಸಲಾತಿ ಒಬ್ಬ ನಿರ್ದೇಶಕರ ಆಯ್ಕೆಗೆ 38ಮತದಾರರು ಇದ್ದಾರೆ.
2)ಕುಂಚಾವರಂ ಸಾಲಗಾರರ ಸಾಮಾನ್ಯ ಮತಕ್ಷೇತ್ರದ ಒಬ್ಬ ನಿರ್ದೇಶಕರ ಆಯ್ಕೆಗೆ 33ಮತದಾರರು ಇದ್ದಾರೆ.
3)ಚಂದನಕೇರಾ ಸಾಲಗಾರರ ಸಾಮಾನ್ಯ ಮತಕ್ಷೇತ್ರದ ಒಬ್ಬ ನಿರ್ದೇಶಕರ ಆಯ್ಕೆಗೆ 75ಮತದಾರರು ಇದ್ದಾರೆ.
4)ಕೋಡ್ಲಿ ಸಾಲಗಾರರ ಸಾಮಾನ್ಯ ಮತಕ್ಷೇತ್ರದ ಒಬ್ಬ ನಿರ್ದೇಶಕ ಆಯ್ಕೆಗೆ 50ಮತದಾರರು ಇದ್ದಾರೆ.
5)ಚಿಮ್ಮಾಯಿದ್ಲಾಯಿ ಸಾಲಗಾರರ ಸಾಮಾನ್ಯ ಮತಕ್ಷೇತ್ರದ ಒಬ್ಬ ನಿರ್ದೇಶಕರ ಆಯ್ಕೆಗೆ 48ಮತದಾರರು ಇದ್ದಾರೆ.
6)ರಟಕಲ್ ಸಾಲಗಾರರ ಸಾಮಾನ್ಯ ಮತಕ್ಷೇತ್ರದ ಒಬ್ಬ ನಿರ್ದೇಶಕರ ಆಯ್ಕೆಗೆ 24ಮತದಾರರು ಇದ್ದಾರೆ.
7)ಮಿರಿಯಾಣ ಸಾಲಗಾರರ ಸಾಮಾನ್ಯ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 21ಮತದಾರರು ಇದ್ದಾರೆ.
8)ಚಿಮ್ಮಾನಚೋಡ ಸಾಲಗಾರರ ಮಹಿಳಾ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 34ಮತದಾರರು ಇದ್ದಾರೆ.
9)ನಿಡಗುಂದಾ ಸಾಲಗಾರರ ಮಹಿಳಾ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 96ಮತದಾರರು ಇದ್ದಾರೆ.
10)ಪೋಲಕಪಳ್ಳಿ ಸಾಲಗಾರರ ಹಿಂದುಳಿದ ವರ್ಗ ‘ಅ’ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 22ಮತದಾರರು ಇದ್ದಾರೆ.
11)ಚಿಂಚೋಳಿ ಸಾಲಗಾರರ ಹಿಂದುಳಿದ ವರ್ಗ ‘ಬ’ ಮತಕ್ಷೇತ್ರದಿಂದ ಒಬ್ಬ ನಿರ್ದೆಶಕರ ಆಯ್ಕೆಗೆ 88ಮತದಾರರು ಇದ್ದಾರೆ.
12)ಗರಗಪಳ್ಳಿ ಸಾಲಗಾರರ ಪರಿಶೀಷ್ಟ ಜಾತಿ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 20ಮತದಾರರು ಇದ್ದಾರೆ.
13)ಸುಲೇಪೇಟ ಸಾಲಗಾರರ ಪರಿಶೀಷ್ಟ ಪಂಗಡ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 33ಮತದಾರರು ಇದ್ದಾರೆ.
14)ಚಿಂಚೋಳಿ ತಾಲ್ಲೂಕಿನ ಸಾಲಗಾರರಲ್ಲದ ಸಾಮಾನ್ಯ ಮತಕ್ಷೇತ್ರದಿಂದ ಒಬ್ಬ ನಿರ್ದೇಶಕರ ಆಯ್ಕೆಗೆ 163ಮತದಾರರು ಇದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಾಗಣ್ಣ ಯಲ್ದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
