
ಉದಯವಾಹಿನಿ,ಚಿಂಚೋಳಿ:ತಾಲ್ಲೂಕಿನ ಐನೋಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ತಪೋರತ್ನ ಪೂಜ್ಯ ಶ್ರೀ ಷ.ಬ್ರ.ವಿಜಯ ಮಹಾಂತೇಶ್ವರ ಶಿವಾಚಾರ್ಯರು ಅವರಿಂದ ದಿವ್ಯ ಮಹಾದಾಸೋಹಿ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ವಿಶ್ವನಾಥ ಬೆನಕಿನ್ ವಕೀಲರು ತಿಳಿಸಿದ್ದಾರೆ.ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಕಾರ್ಯಕ್ರಮವು ಅಗಷ್ಟ್ 21ರಿಂದ ಸೆಪ್ಟೆಂಬರ್ 14ರವರೆಗೆ ಪ್ರತಿದಿನ ರಾತ್ರಿ 8.30ರಿಂದ 9.30ರವರೆಗೆ ಹಮ್ಮಿಕೊಂಡಿದ್ದು ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಸಕಲ ಸಧ್ಬಕ್ತರು ಪಾಲ್ಗೊಂಡು ಪೂಜ್ಯರ ಆಶೀರ್ವಾದ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮಂತ ಕಟ್ಟಿಮನಿ,ಧರ್ಮಣ್ಣ ಗೌನಳ್ಳಿ,ರಾಮಯ್ಯಸ್ವಾಮಿ,ಅಕ್ಬರ ಹುಡಾ,ಕಮಲಾಬಾಯಿ ಭೋಗನಿಂಗದಳ್ಳಿ,ವಿಶ್ವನಾಥ ತುಮ್ಮನಪಳ್ಳಿ,ಮಶಾಕ್ ಲಕಪತಿ,ಭೀಮಶೇಟ್ಟಿ ಮುರುಡಾ,ನೀಲಕಂಠಪ್ಪ ಚಟ್ನಳ್ಳಿ,ಹಣಮಂತ ಹೀರೆಮನಿ,ಬಸಮ್ಮ ಗೌನಳ್ಳಿ,ಶಶಿಧರ ಅನೇಕರಿದ್ದರು.
