ಉದಯವಾಹಿನಿ ನಾಗಮಂಗಲ:  ನಿಸ್ವಾರ್ಥ ಸಮಾಜಸೇವಾ ಮನೋಭಾವನೆಯಿಂದ ಸಾಮಾಜಿಕ ಕಳಕಳಿಯುಳ್ಳ  ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವ ಲಯನ್ ಸಂಸ್ಥೆಯ ಬಗ್ಗೆ ಗೌರವಿಸಬೇಕೆಂದು ಶ್ರೀಮತಿ ಧನಲಕ್ಷ್ಮಿ ಚೆಲುವರಾಯಸ್ವಾಮಿ ಯವರು ತಿಳಿಸಿದರು.ಅವರು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ  ಅಂತರಾಷ್ಟ್ರೀಯ ಲಯನ್ ಸಂಸ್ಥೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು  ಈಸ್ಟ್ ಪ್ರಾಜೆಕ್ಟ್. ಡಾ. ಎಸ್. ಆರ್. ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಬೆಂಗಳೂರು ಹಾಗೂ ಲಯನ್ಸ್ ಕ್ಲಬ್ ಆಫ್ ನಾಗಮಂಗಲ ಸೆಂಟ್ರಲ್ ಇವರು ಆಯೋಜನೆ ಮಾಡಿದ್ದ ವಾಕ್ ಶ್ರಾವಣ ದೋಷ ಇರುವವರಿಗೆ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟನೆ ಮಾಡುತ್ತಾ ಮಾತನಾಡಿದರು.ಲಯನ್ಸ್ ಎಂಬ ಸಂಸ್ಥೆ ಆರೋಗ್ಯ ಶಿಕ್ಷಣ ಸಾಮಾಜಿಕ ಹಾಗೂ ಸಮಾಜದ ಇತರೆ ವಿವಿಧ ಸ್ಥಳಗಳಲ್ಲಿ ಕೇವಲ ಸೀಮಿತವಾಗಿರದೆ ಎಲ್ಲೆಡೆ ತಮ್ಮ ವ್ಯಾಪ್ತಿಯಲ್ಲಿ ಸಾಮಾಜಿಕ ಕಳಕಳಿ, ಮೈಗೂಡಿಸಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಸೇವಾ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದು ಇಂತಹ ಸಂಸ್ಥೆಗೆ ಹಾಗೂ ಸಾಮಾಜಿಕ ಬದ್ಧತೆಯ ಸೇವಾ ಕಾರ್ಯಗಳಿಗೆ ಮುಂಚೂಣಿಯಾಗಿ ಕಾರ್ಯನಿರ್ವಹಿಸುತ್ತಿದ್ದು ನಾವುಗಳು ಈ ಸಂಸ್ಥೆಯಲ್ಲಿ ಸದಸ್ಯರಾಗಿ ಪಡೆದುಕೊಂಡು ಸಂಸ್ಥೆಯ ಬೆಳವಣಿಗೆಗೆ ನಮ್ಮಗಳ ಸಾಮಾಜಿಕ ಸೇವಾ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದರು.ತಾಲೂಕಿನಲ್ಲಿ ಈ ಶಿಬಿರವು 22 ರಿಂದ 26ರವರೆಗೆ   ಹೋಬಳಿ ಮಟ್ಟದಲ್ಲಿ ತಪಾಸಣಾ ಶಿಬಿರಗಳು ನಡೆಯಲಿದೆ.
ಸಮಾರಂಭದಲ್ಲಿ ಲಯನ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಮಾಜಿ ತಾಪಂ ಅಧ್ಯಕ್ಷ ಕೃಷ್ಣೆಗೌಡ ಹಾಗೂ ಲಯನ್ ಸುನಿಲ್ ಲಕ್ಷ್ಮಿಕಾಂತ್ ಹಾಗೂ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!