ಉದಯವಾಹಿನಿ ಮಾಲೂರು:  ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ತಲೆ ಮರೆಸಿಕೊಂಡಿರುವ ನಟ, ಪ್ರಜಾಕೀಯ ನಾಯಕ ಉಪೇಂದ್ರನನ್ನು ಪೊಲೀಸರು ಶೀಘ್ರ ಬಂದಿಸದೆ ಹೋದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ದಲಿತ ಸಿಂಹ ಸೇನೆ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್  ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಭಾರತ ದೇಶಕ್ಕೆ ಸ್ವಾತಂತ್ರ‍್ಯ ಬಂದು 77 ವರ್ಷ ಕಳೆದರು ಮನುವಾಧಿಗಳಿಂದ ಕೆಲವರ್ಗದವರಿಗೆ ಇನ್ನೂ ಸ್ವಾತಂತ್ರ‍್ಯ ಬಂದಿಲ್ಲ, ಕೆಳ ವರ್ಗಗಳು ಮುಂಚೂಣಿಗೆ ಬರಲು ಹಾದಿಯಾಗಿರುವ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿರುದ್ಧವಾಗಿ ಅವಹೇಳನಕಾರಿ ಹೇಳಿಕೆಯನ್ನು ನೀಡುವ ಸಂಸ್ಕೃತಿ ಉಳ್ಳ ದೇಶ ದ್ರೋಹಿಗಳು ಹೆಚ್ಚಾಗುತ್ತಿದ್ದು,  ಮೇಲ್ನೋಟಕ್ಕೆ ನಮ್ಮಲ್ಲಿರುವ ಸರ್ಕಾರಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಸಮುದಾಯವನ್ನು ಅವಮಾನ ಮಾಡುವುದು ಮತ್ತು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಈ ದೇಶವನ್ನು ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿ, ಇತ್ತೀಚೆಗೆ ಕನ್ನಡ ಚಲನಚಿತ್ರ ನಟ ನಿರ್ಮಾಪಕರಾದ ಉಪೇಂದ್ರರವರು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೇಳಿಕೆಯಲ್ಲಿ ದಲಿತ ಸಮುದಾಯವನ್ನು ಅವಹೇಳನವಾಗಿ ಮಾತನಾಡಿರುವುದು ಈ ದೇಶದ ಮತ್ತು ರಾಜ್ಯದ ಜನತೆ ತಲೆ ತಗ್ಗಿಸುವಂತಹ ಹೇಳಿಕೆಯಾಗಿದೆ.
ಉಪೇಂದ್ರ ಅವರ ವಿರುದ್ಧ ಅನೇಕ ಭಾಗಗಳಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರುಗಳು ದಾಖಲಾಗಿದ್ದು, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಉಪೇಂದ್ರ ರವರನ್ನು ಬಂಧಿಸಲು ವಿಫಲವಾಗಿದ್ದು, ಈಗಾಗಲೇ ಅನೇಕ ದಲಿತ ಮತ್ತು ಪ್ರಗತಿಪರ ಸಂಘಟನೆಗಳು, ಮುಖಂಡರು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಸಹ ಸರ್ಕಾರ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದು, ಕೂಡಲೇ ಉಪೇಂದ್ರರವರನ್ನು ಬಂಧಿಸಿ ಈ ರಾಜ್ಯದಿಂದ ಗಡಿಪಾರು ಮಾಡಲು ಈ ಪ್ರತಿಭಾಟನೆ ಮೂಲಕ ಒತ್ತಯಿಸುತ್ತಿದ್ದೇವೆ. ಇಲ್ಲದ ಪಕ್ಷದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ದಲಿತ ಸಿಂಹ ಸೇನೆ ಕರ್ನಾಟಕ ಸಂಘಟನೆಯ ರಾಜ್ಯ ಯುವ ಘಟಕ ಉಪಾಧ್ಯಕ್ಷ ಚನ್ನಕಲ್ ಸಂತೋಷ್, ತಾಲ್ಲೂಕು ಅಧ್ಯಕ್ಷ ದೊಡ್ಡ ಕಲ್ಲಹಳ್ಳಿ ವೆಂಕಟೇಶ್, ಪದಾಧಿಕಾರಿಗಳಾದ ಮಧು, ಇಗ್ಗಲೂರುಯಲ್ಲಪ್ಪ, ಗೋಪಿ, ನಾಗೊಂಡಹಳ್ಳಿ ಮೀಸೆ ಮುನಿಯಪ್ಪ, ಹರೀಶ್, ಪ್ರಕಾಶ್, ಸಂದೀಪ್, ಬಾಲರಾಜ್, ಮಾರಪ್ಪ, ನರಸಿಂಹ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!