ಉದಯವಾಹಿನಿ ಸಿರುಗುಪ್ಪ : ನಗರದ ತಾಲೂಕು ಕಛೇರಿಯ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆ ಬಳ್ಳಾರಿ ವಿಭಾಗದ ಸಿಪಿಐ ಸಂಗಮೇಶ್ ಅವರಿಂದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು. ಹಲವು ವರ್ಷಗಳಿಂದ ನಮ್ಮ ಜಮೀನಿಗೆ ಕಾಲುವೆ ನೀರು ಹರಿಸಿ ಬೆಳೆ ಬೆಳೆಯುತ್ತಿದ್ದೆವು. ಆದರೆ ಕಳೆದ ಕೆಲವು ವರ್ಷಗಳಿಂದ ಪಕ್ಕದ ಜಮೀನಿನ ರೈತರಾದ ನರಸಪ್ಪ ಮತ್ತು ಬಜಾರಪ್ಪ ನಮಗೆ ನೀರು ಬಿಡುತ್ತಿಲ್ಲವಾದ್ದರಿಂದ ಸಂಬ0ದಿಸಿದ ಇಲಾಖೆಯಿಂದ ನ್ಯಾಯ ದೊರೆಕಿಸುವಂತೆ ಇಟಿಗೆಹಾಳ್ ಗ್ರಾಮದ ಮಹಿಳೆ ಸಿದ್ದಲಿಂಗಮ್ಮ ವಿನಂತಿಸಿದರು.
ನಂ.64 ಹಳೆಕೋಟೆ ಗ್ರಾಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ಕಲ್ಯಾಣಿ ಕ್ರಷರ್‌ನಿಂದ ಭಾರಿ ಸ್ಪೋಟದಿಂದ ಗ್ರಾಮದಲ್ಲಿ ಭೂಕಂಪನವಾದAತ ಅನುಭವಾಗಿ ಮನೆಗಳು ಬಿರುಕು ಬಿಟ್ಟಿವೆ. ಅಲ್ಲದೇ ವಿಷಕಾರಿ ದೂಳಿನಿಂದ ಶ್ರೀ ಮರಿಶಿವಯೋಗಿಗಳ ಮಠದ ಕೆರೆಯಲ್ಲಿನ ಮೀನುಗಳು ಸತ್ತಿವೆ.ಕ್ರಷರ್‌ಗಳ ಕಾರ್ಯಚಟುವಟಿಕೆ ನಿಲ್ಲಿಸುವಂತೆ ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ನಿಷ್ಪçಯೋಜಕವಾಗಿದೆಂದು ಹೆಚ್.ಎಮ್.ವೀರೇಶಪ್ಪ, ಟಿ.ಯಲ್ಲಪ್ಪ ಬೇಸರ ವ್ಯಕ್ತಪಡಿಸಿದರು.ಹಚ್ಚೊಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿದೆ. ಗಡಿಭಾಗದ ಜನರ ಜೀವಕ್ಕೆ ರಕ್ಷಣೆಯಿಲ್ಲವಾಗಿದೆಂದು ರಾಜಕುಮಾರ್ ತಮ್ಮ ನೋವು ವ್ಯಕ್ತಪಡಿಸಿದರು.ಬಿ.ಎಮ್.ಸೂಗೂರು ಗ್ರಾಮದಲ್ಲಿ ಕೆರೆ ದುರಸ್ತಿ ಹಾಗೂ ನೀರು ತುಂಬಿಸುವ0ತೆ ಒತ್ತಾಯಿಸಲಾಯಿತು.
ಡ್ರೆöÊವರ್ ಕಾಲೋನಿಯಲ್ಲಿ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಸಂಬ0ದಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯರಾದ ನಾಗಯ್ಯಸ್ವಾಮಿ ಮತ್ತು ವೀರೇಶಪ್ಪ ಆಗ್ರಹಿಸಿದರು.
ಇನ್ನೂ ಅನೇಕ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿದಲೋಕಾಯುಕ್ತರು ಸಂಬ0ದಿಸಿದ ಇಲಾಖೆಗಳ ಮೂಲಕ ಮಾಹಿತಿ ಪಡೆದು ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ಇದೇ ವೇಳೆ ಗ್ರೇಡ್-2 ತಹಶೀಲ್ದಾರ್ ರತ್ನಮ್ಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
