ಉದಯವಾಹಿನಿ ಮುದ್ದೇಬಿಹಾಳ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾಗಿರುವ ಪಿಜಿಆರ್ ಸಿಂಧ್ಯಾರವರ ಸೂಚನೆ ಮೇರೆಗೆ ಸ್ಥಳೀಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ತರಬೇತಿ ಕಾರ್ಯಾಲಯದಲ್ಲಿ ಸೋಮವಾರ ನನ್ನ ಮಣ್ಣು, ನನ್ನ ದೇಶ ಅಭಿಯಾನ ಹಿನ್ನೆಲೆ ಸ್ಥಳೀಯ ಮಣ್ಣು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಎರಡು ತರಹದ ಕಪ್ಪು ಮತ್ತು ಕೆಂಪು ಮಣ್ಣನ್ನು ವಿಧಿವತ್ತಾಗಿ ಪೂಜಿಸಿ, ಕಳಸವೊಂದರಲ್ಲಿ ತುಂಬಿ ಅದನ್ನು ವಿಜಯಪುರದಲ್ಲಿರುವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಕಳಿಸಿಕೊಡಲಾಯಿತು. ಅಲ್ಲಿಂದ ರಾಜ್ಯ ಕಚೇರಿ ಮೂಲಕ ದೆಹಲಿಗೆ ಈ ಮಣ್ಣು ರವಾನೆಯಾಗಲಿದೆ. ಅಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿರುವ ಮಣ್ಣನ್ನು ಸಂಗ್ರಹಿಸಿಡಿಲಾಗುತ್ತದೆ ಎಂದು ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ಸಿಆರ್‌ಪಿ ಗುಂಡು ಚವ್ಹಾಣ ತಿಳಿಸಿದರು.
ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಡಿ.ಬಿ.ವಡವಡಗಿ ಅವರು ಮಾತನಾಡಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ಈ ವಿಶಿಷ್ಟ ಅಭಿಯಾನವನ್ನು ಕಳೆದ ವರ್ಷದಿಂದ ಪ್ರಾರಂಭಿಸಿದ್ದಾರೆ. ಕಳೆದ ಸ್ವಾತಂತ್ರö್ಯಯ ದಿನಾಚರಣೆಗೂ ಮುನ್ನ ಪ್ರಾರಂಭಗೂಂಡಿರುವ ಅಭಿಯಾನದಲ್ಲಿ ಸ್ಥಳೀಯವಾಗಿ ಸಂಗ್ರಹಿಸಿದ ಮಣ್ಣನ್ನು ಸುರಕ್ಷಿತವಾಗಿ ದೆಹಲಿಗೆ ಕಳಿಸಲಾಗುತ್ತದೆ. ಇದು ದೇಶದ ಏಕತೆ ಮತ್ತು ಸಮಗ್ರತೆಯ ಜೊತೆಗೆ ಸೌಹಾರ್ದತೆಯನ್ನೂ ಬಿಂಬಿಸುತ್ತದೆ ಎಂದರು. ಸಂಸ್ಥೆಯ ಉಪ ಸಮಿತಿ ಚೇರಮನ್ ಪ್ರೊ| ಎಸ್.ಎಸ್.ಹೂಗಾರ ಅವರು ಮಾತನಾಡಿ ಈ ಅಭಿಯಾನ ಯಶಸ್ಸಿಗೆ ಶ್ರಮಿಸಿದ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ನಡೆಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಲು ಈಚೆಗೆ ಜಿಲ್ಲಾ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿ ಮುಂದಿನ ತಿಂಗಳು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳ ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಮಾಲಿಪಾಟೀಲ, ಮುತ್ತಪ್ಪನವರ್ ಮತ್ತಿತರರು ಇದ್ದರು. ಶಾಸ್ತ್ರೋಕ್ತವಾಗಿ ಪೂಜಿಸಿ ಮಣ್ಣು ತುಂಬಿದ ಕಳಸವನ್ನು ಸಂಸ್ಥೆಯ ಖಜಾಂಚಿ ಜಿ.ಎನ್.ಹೂಗಾರ ಅವರಿಗೆ ಹಸ್ತಾಂತರಿಸಿ ವಿಜಯಪುರದ ಜಿಲ್ಲಾ ಕಚೇರಿಗೆ ತಲುಪಿಸಲು ತಿಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!