ಉದಯವಾಹಿನಿ,ಬೆಂಗಳೂರು : ರಾಜ್ಯ ಸರ್ಕಾರವೂ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕು ಎನ್ನುವ ವಾದವನ್ನು ಗಟ್ಟಿಯಾಗಿ ನ್ಯಾಯಮಂಡಳಿ ಬಳಿ ಮಂಡಿಸಬೇಕು.ಇಲ್ಲದಿದ್ದರೆ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.ನಗರದಲ್ಲಿಂದು ವಿಧಾನಸೌಧದಲ್ಲಿ ನಡೆದ ಕಾವೇರಿ ಹಾಗೂ ಮಹದಾಯಿ ಜಲವಿವಾದಗಳಿಗೆ ಸಂಬಂಧಿಸಿದ ಸರ್ವ ಪಕ್ಷಗಳ ಸಭೆ ಬಳಿಕ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ರೀತಿಯ ವಾತಾವರಣವಿತ್ತು. ಇನ್ನೂ, ತಮಿಳುನಾಡಿನಲ್ಲಿ ಶೇಖರಣೆ ಆಗಿರುವ ನೀರು ಎಷ್ಟು ಎನ್ನುವ ಮಾಹಿತಿ ಪಡೆಯಬೇಕು.ಜೊತೆಗೆ, ಇಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆ ಇದೆ ಎನ್ನುವ ವಾದವನ್ನು ಸಮರ್ಪಕವಾಗಿ ನ್ಯಾಯ ಮಂಡಳಿಯ ತ್ರಿಸದಸ್ಯ ಪೀಠದ ಮುಂದೆ ರಾಜ್ಯ ಸರ್ಕಾರ ಮಂಡಿಸಬೇಕಾಗಿದೆ ಎಂದರು.ಈಗಾಗಲೇ ಸುಪ್ರೀಂ ಕೋರ್ಟಿನ ಆದೇಶ ಇರುವ ಹಿನ್ನೆಲೆ ನೀರು ಬಳಕೆ ಕುರಿತು ಲೆಕ್ಕ ಮಾಡಲು ಸಾಧ್ಯವಿಲ್ಲ.ಆದರೆ, ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರವೂ ಜನರ ಹಿತದೃಷ್ಟಿಗಾಗಿ ಕೆಲಸ ಮಾಡಬೇಕು. ಈ ಸಂಬಂಧ ಸಭೆಯಲ್ಲಿ ಸಲಹೆಗಳನ್ನು ನೀಡಿದ್ದೇನೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!