ಉದಯವಾಹಿನಿ, ಮಾಸ್ಕೊ, : ಕಪ್ಪು ಸಮುದ್ರ ಸಮೀಪದ ಅತೀ ಪುಟ್ಟ ದ್ವೀಪವಾದ ಸ್ನೇಕ್ ಐಲ್ಯಾಂಡ್‌ನಲ್ಲಿ ಅಮೆರಿಕ ನಿರ್ಮಿತ ಸೇನಾ ಸ್ಪೀಡ್‌ಬೋಟ್ ಒಂದನ್ನು ಧ್ವಂಸಮಾಡಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಸ್ನೇಕ್ ಐಲ್ಯಾಂಡ್, ರಷ್ಯಾ ವಿರುದ್ಧದ ಸಮರದ ಆರಂಭದ ದಿನಗಳಲ್ಲಿ ಉಕ್ರೇನ್ ತೋರಿದ ದಿಟ್ಟ ಪ್ರತಿರೋಧಕ್ಕೆ ಸಾಕ್ಷಿಯಾಗಿತ್ತು. ೨೦೨೨ರ ಫೆಬ್ರವರಿ ೨೪ರಂದು ಮೊಸ್ಕವಾ ಯುದ್ಧ ನೌಕೆಯಲ್ಲಿ ಕಪ್ಪುಸಮುದ್ರಕ್ಕೆ ದಾಳಿಯಿಟ್ಟ ರಷ್ಯಾದ ಸೇನಾಧಿಕಾರಿಗಳು, ದ್ವೀಪದಲ್ಲಿ ನಿಯೋಜಿತಾಗಿದ್ದ ಉಕ್ರೇನ್ ಸೈನಿಕರಿಗೆ ಶರಣಾಗುವಂತೆಯೂ ತಪ್ಪಿದಲ್ಲಿ ಸಾಯಲು ಸಿದ್ಥರಾಗುವಂತೆ ಬೆದರಿಕೆ ಹಾಕಿದ್ದರು. ಆದರೆ ಉಕ್ರೇನ್ ಯೋಧರು ರಷ್ಯಾದ ಬೆದರಿಕೆಗೆ ಮಣಿಯದೆ ಪ್ರಾಣದ ಹಂಗು ತೊರೆದು ಹೋರಾಡಿದ್ದರು. ರಶ್ಯವು ಈ ದ್ವೀಪವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತಾದರೂ ತನ್ನ ಹಲವು ಸೈನಿಕರನ್ನು ಕಳೆದುಕೊಳ್ಳಬೇಕಾಯಿತು ಈ ವರ್ಷದ ಜೂನ್ ೩೦ರಂದು ಈ ದ್ವೀವನ್ನು ರಷ್ಯನ್ ಸೈನಿಕರು ತೊರೆದುಹೋದರು.

Leave a Reply

Your email address will not be published. Required fields are marked *

error: Content is protected !!