ಉದಯವಾಹಿನಿ, ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರ ನಾಗರಿಕ ಥಾರ್ಮನ್ ಷಣ್ಮುಗರತ್ನಂ ಅವರು ಸೆಪ್ಟೆಂಬರ್ ೧ರಂದು ನಡೆಯಲಿರುವ ಸಿಂಗಾಪುರದ ಅಧ್ಯಕ್ಷೀಯ ಚುನಾವಣೆಗೆ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ಥಾರ್ಮನ್ ಅವರು, ತಾನು ಗೌರವಾನ್ವಿತ ಹಾಗೂ ಘನತೆಯ ಸ್ಪರ್ಧೆಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಪ್ರತಿಯೊಬ್ಬ ಅಭ್ಯರ್ಥಿಯು ಸಿಂಗಾಪುರದ ಪ್ರಜೆಗಳಿಗೆ ಏನನ್ನು ತಂದುಕೊಡಲಿದ್ದಾನೆ ಹಾಗೂ ದೇಶದ ಭವಿಷ್ಯಕ್ಕೆ ಏನು ಕೊಡುಗೆ ನೀಡಲಿದ್ದಾರೆಂಬುದನ್ನು ಕೇಂದ್ರೀಕರಿಸಿ ಪ್ರಚಾರ ನಡೆಯಲಿದೆ. ತಾನು ನ್ಯಾಯಯುತವಾದ, ಅಧಿಕ ದಯಾಭರಿತ ಹಾಗೂ ಎಲ್ಲರನ್ನೂ ಒಳಗೊಂಡ ಸಮಾಜದಲ್ಲಿ ನಂಬಿಕೆಯಿರಿಸಿದ್ದೇನೆ. ನನ್ನ ಜೀವನವಿಡೀ ಅದಕ್ಕೆ ಸಮರ್ಪಿತವಾಗಿದೆ. ಸಿಂಗಾಪುರವನ್ನು ವಿಶಿಷ್ಟವಾಗಿಸಬಹುದಾಗಿ ಎಂದು ತಾಮರನ್ ತನ್ನ ಭಾಷಣದಲ್ಲಿ ಹೇಳಿರುವುದಾಗಿ ವರದಿ ತಿಳಿಸಿದೆ. ಅರ್ಥಶಾಸ್ತ್ರಜ್ಞರಾದ ಥಾರ್ಮನ್ ಅವರು ೨೦೦೧ರಲ್ಲಿ ರಾಜಕಾರಣಕ್ಕೆ ಬರುವ ಮುನ್ನ ಸಿಂಗಾಪುರದ ವಿತ್ತೀಯ ಪ್ರಾಧಿಕಾರದಲ್ಲಿ ಅಧಿಕಾರಿಯಾಗಿದ್ದರು. ೨೦೧೧ರಿಂದ ೨೦೧೯ರವರೆಗೆ ಅವರು ಸಿಂಗಾಪುರದ ಆಡಳಿತಾರೂಢ ಪೀಪಲ್ಸ್ ಆ?ಯಕ್ಷನ್ ಪಾರ್ಟಿ ಸರಕಾರದಲ್ಲಿ ಶಿಕ್ಷಣ ಹಾಗೂ ಹಣಕಾಸು ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇನ್ನು ಸರಕಾರಿ ಸ್ವಾಮ್ಯದ ಕಂಪೆನಿಯೊಂದರ ಮಾಜಿ ಹೂಡಿಕೆ ವರಿಷ್ಠ, ೭೫ ವರ್ಷ ವಯಸ್ಸಿನ ನಿಗ್ ಕೊಕ್ ಸೊಂಗ್ ಹಾಗೂ ಸರಕಾರಿ ಸ್ವಾಮ್ಯದ ವಿಮಾ ಕಂಪೆನಿಯ ಹಿರಿಯ ಟಾನ್ ಕಿನ್ ಲಿಯಾನ್ (೭೫) ಅವರು ಕೂಡಾ ಸಿಂಗಾಪುರದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಸಿಂಗಾಪುರದ ೯ನೇ ಅಧ್ಯಕ್ಷನ ಆಯ್ಕೆಗೆ ನಡೆಯುವ ಈಗಾಗಲೇ ಚುನಾವಣೆ ಪ್ರಚಾರ ಆರಂಭಗೊಂಡಿದ್ದು, ಆಗಸ್ಟ್ ೩೦ಕ್ಕೆ ಕೊನೆಗೊಳ್ಳಲಿದೆ. ಸೆಪ್ಟೆಂಬರ್ ೧ರಂದು ಮತದಾ ನಡೆಯಲಿದೆ. ಸಿಂಗಾಪುರದ ಹಾಲಿ ಅದ್ಯಕ್ಷ ಹಲೀಮಾ ಯಾಕೂಬ್ ಅವರ ಆರು ವರ್ಷಗಳ ಅವಧಿಯು ಸೆಪ್ಟೆಂಬರ್ ೧೩ರಂದು ಕೊನೆಗೊಳ್ಳಲಿದೆ.
