ಉದಯವಾಹಿನಿ, ದೇವದುರ್ಗ: ದೇವದುರ್ಗ ಪೊಲೀಸ್ ಠಾಣಾವ್ಯಾಪ್ತಿಗೆ ಬರುವ ದೇವದುರ್ಗ ಪಟ್ಟಣ, ಅರಕೇರಾ ಮತ್ತು ಮಾನಸಗಲ್ ಕ್ರಾಸ್ ನಲ್ಲಿ ವರದಿಯಾಗಿದ್ದ ಮನೆ ಕಳ್ಳತನ, ಬಂಗಾರದ ಅಂಗಡಿ ಕಳ್ಳತನ, ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಯಚೂರು ಎಸ್ಪಿನಿಖಿಲ್ ಬಿ, ಶಿವಕುಮಾರ್ ದಂಡಿನ್ ಎಎಸ್ಪಿ, ಲಿಂಗಸುಗೂರು ಡಿವೈಎಸ್ಪಿ ಮಂಜುನಾಥ್ ಮಾರ್ಗದರ್ಶನದಲ್ಲಿ, ದೇವದುರ್ಗ ಪೊಲೀಸ್ ಇನ್ಸೆಕ್ಟರ್ ಹೊಸಕೇರಪ್ಪ, ಪಿಎಸ್‌ಐ ಸಿದ್ದರಾಮ ಬಿದರಾಣಿ, ಸಂಚಾರ ವಿಭಾಗ ಪಿಎಸ್‌ಐ ಕರೆಮ್ಮ ಹಾಗೂ ಸಿಬ್ಬಂದಿ ಶಿವಣ್ಣ ಪಿಹೆಚ್ಚಿ 88 ಸೇರಿದಂತೆ ದೇವದುರ್ಗ ಪೊಲೀಸರ ತಂಡವು ರೂಢಿಗತ ಕಳ್ಳತನ ಮಾಡುವ ಒಬ್ಬ ಆರೋಪಿಯನ್ನು ವಶಕ್ಕೆಪಡೆದಿದ್ದಾರೆ. ಮುಂಜಾನೆ ವೇಳೆ ದೇವದುರ್ಗ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಹಿಡಿದು ವಶಕ್ಕೆ ಪಡೆದುಕೊಂಡು ಸಂಬಂಧಪಟ್ಟ ದೇವದುರ್ಗ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದು ಒಟ್ಟು ಮೂರು ಪ್ರಕರಣಗಳ 5,52,500 ರೂಗಳಷ್ಟು ಬೆಲೆಬಾಳುವ 8 ತೊಲೆ 5 ಗ್ರಾಂ. ಬಂಗಾರದ ಆಭರಣಗಳನ್ನು ಹಾಗೂ 4,900 ಗಳಷ್ಟು ಬೆಲೆಬಾಳುವ 7 ತೊಲೆ ಬೆಳ್ಳಿಯ ಮೂರ್ತಿಗಳನ್ನು ಹೀಗೆ ಒಟ್ಟು 8 ತೊಲೆ 5 ಗ್ರಾಂ, ಬಂಗಾರದ ಮತ್ತು 7 ತೊಲೆಯ ಬೆಳ್ಳಿಯ ಆಭರಣಗಳು ಒಟ್ಟು ಮೌಲ್ಯ 5,57,400 ಗಳನ್ನು ಜಪ್ತಿಪಡಿಸಿಕೊಂಡು ಆರೋಪಿಯನ್ನು
ನ್ಯಾಯಾಂಗಬಂಧನಕ್ಕೆಕಳುಹಿಸಿಕೊಟ್ಟಿರುತ್ತಾರೆ. ದೇವದುರ್ಗ ಪಿಐ ಹೊಸಕೇರಪ್ಪ ಅವರ ನೇತೃತ್ವದಲ್ಲಿ, ಪಿಎಸ್‌ಐ ಸಿದ್ದರಾಮ್ ಬಿದರಾಣಿ, ಸಂಚಾರ ಪಿಎಸ್‌ಐ ಕರೆಮ್ಮ ಹಾಗೂ ಮರಸಣ್ಣ CH 227 ಹಾಗೂ cpcಗಳಾದ ಪ್ರಕಾಶ ರಿಯಾಜ್ ,ಸಿದ್ದಪ್ಪ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ
