ಇಲಿಯಾಸ್ ಪಟೇಲ್. ಬ
ಉದಯವಾಹಿನಿ, ಯಾದಗಿರಿ: ಫಲಿತಾಂಶದಲ್ಲಿ ಸದಾ ಹಿಂದುಳಿಯುವ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಉಧ್ಭವಿಸಿದ್ದು, ಮಂಜೂರಾದ ಹುದ್ದೆಗಳಲ್ಲಿನ ಮುಕ್ಕಾಲು ಭಾಗ ಖಾಲಿಯಾಗಿರುವುದು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಿನ್ನೆಡೆಯಾಗಿ ಕಾರಣವಾಗಿದೆ. ಅಂತರ್ ವಿಭಾಗಗಳಿಗೆ ವರ್ಗಾವಣೆಯಲ್ಲಿ ೪೪೪ ಶಿಕ್ಷಕರ ವರ್ಗಾವಣೆಯಾದರೆ ಇಲ್ಲಿಗೆ ಬಂದಿರುವ ಸಂಖ್ಯೆ ಕೇವಲ ೫. ಇದರಿಂದ ಮೊದಲೆ ಶಿಕ್ಷಕರ ಬರ ಹೊಂದಿರುವ ಜಿಲ್ಲೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೫೬೨೬ ಮಂಜೂರಾದ ಹುದ್ದೆಗಳಲ್ಲಿ ೩೨೪೭ ಹುದ್ದೆಗಳು ಭರ್ತಿಯಾಗಿದ್ದು, ಪ್ರೌಢಶಾಲಾ ವಿಭಾಗದಲ್ಲಿ ಮಂಜೂರಾದ ಒಟ್ಟು ೧೪೩೪ ಹುದ್ದೆ ಪೈಕಿ ೬೬೨ ಶಿಕ್ಷಕರ ಕೊರತೆಯಿದ್ದು, ಇದರಲ್ಲಿ ಅತಿ ಹೆಚ್ಚು ವಿಷಯ ಭೋದನಾ ಶಿಕ್ಷಕರೇ ಇಲ್ಲದೇ ಇರುವುದು ಗಮನಾರ್ಹ ಅಂಶವಾಗಿದೆ.
ಇದ್ದು ಸಾಲದ್ದು ಎಂಬAತೆ ಇತ್ತಿಚೇಗೆ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಂತರ್ ಜಿಲ್ಲೆಗಳಿಗೆ ೧೯೦ ಶಿಕ್ಷಕರ ವರ್ಗಾವಣೆಯಾಗಿದ್ದು, ಇನ್ನು ಅಂತರ್‌ವಿಭಾಗಕ್ಕೆ ೪೪೪ ಶಿಕ್ಷಕರ ವರ್ಗಾವಣೆಯಾಗಿದೆ. ಇವರನ್ನು ಸದ್ಯದ ಮಟ್ಟಿಗೆ ಬಿಡುಗಡೆಗೊಳಿಸಿಲ್ಲ. ಆದರೆ, ಮುಂದೆ ಬಿಡುಗಡೆಗೊಳಿಸಿದರೆ ಕೊರತೆ ಸಂಖ್ಯೆ ಮತ್ತಷ್ಟು ಏರಿಕೆ ಕಾಣಲಿದೆ.
ಜಿಲ್ಲೆಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಬರ’ದಿಂದಾಗಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಪೆಟ್ಟು ಬೀಳುತ್ತಿದೆ. ಮಂಜೂರಾದ ಹುದ್ದೆಯ ಅರ್ಧಕ್ಕಿಂತ ಹೆಚ್ಚು ಖಾಲಿಯಿರುವುದು ಜಿಲ್ಲೆಯ ಮಕ್ಕಳ ಶಿಕ್ಷಣದ ಮೇಲೆ ಪೆಟ್ಟು ಬಿದ್ದಿದೆ. ಅತಿಥಿ ಶಿಕ್ಷಕರ ಕೈಯಲ್ಲಿ ಮಕ್ಕಳ ಭವಿಷ್ಯ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ವಿಷಯ ಭೋಧನೆಗೆ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರೆ ನೇಮಕ ಮಾಡಲಾಗಿದ್ದು, ಸರಕಾರಿ ಶಾಲೆಯ ಮಕ್ಕಳ ಭವಿಷ್ಯ ಅತಿಥಿ ಶಿಕ್ಷಕರ ಮೇಲೆ ನಿಂತಿದ್ದು, ಪಾಲಕರ ಚಿಂತೆ ಮತ್ತಷ್ಟು ಹೆಚ್ಚು ಮಾಡಿದೆ. ಜಿಲ್ಲೆಯ ೯೮ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ, ಅದರಲ್ಲಿಯೂ ಕೊರತೆಯಿರುವ ಶಿಕ್ಷಕರಲ್ಲಿ ಕಠಿಣ ವಿಷಯಗಳಾದ ಆಂಗ್ಲ, ವಿಜ್ಞಾನ, ಗಣಿತ ಭೋದಿಸುವವರ ಹೆಚ್ಚಿನ ಸಂಖ್ಯೆಯಲ್ಲಿರುವುದು ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ದುರ್ದೈವವಾಗಿದೆ.
ಕೋಟ್ “ಸರಕಾರ ಕಾಯಂ ಶಿಕ್ಷಕರನ್ನು ನೇಮಿಸಬೇಕು, ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಅತಿಥಿ ಶಿಕ್ಷಕರಿಂದ ಶಾಲೆಗಳೂ ನಡೆತಾ ಇವೆ, ಅತಿಥಿ ಶಿಕ್ಷಕರು ಹೆಚ್ಚಿನ ರೀತಿಯಲ್ಲಿ ಜವಾಬ್ದಾರಿಯನ್ನು ನಿಭಾಯಿಸಿಕೊಳ್ಳಲು ಆಗುವುದಿಲ್ಲ, ಯಾದಗಿರಿ ಜಿಲ್ಲೆಯ ಹಲವಾರು ಸರಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸರಿಯಾಗಿ ನಡೀತಾ ಇಲ್ಲ, ಸರಕಾರ ಆದಷ್ಟು ಬೇಗ ಶಿಕ್ಷಕರನ್ನು ನೇಮಿಸಬೇಕು.
_ಎಚ್. ಆರ್. ಬಡಿಗೇರ್ ರೈತ ಸಂಘದ ಅಧ್ಯಕ್ಷರು ಸುರಪುರ
“ಕೆಕೆಆರ್‌ಡಿಬಿ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷರು, ಇದೇ ಭಾಗದವರಿದ್ದು, ಈಗಾಗಲೇ ನೇರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು, ಸ್ವಾಗತಾರ್ಹವಾಗಿದೆ ಮೊದಲಿಗೆ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿಗೆ ಚಾಲನೆ ನೀಡಿ, ಈ ಶಿಕ್ಷಕರ ಕೊರತೆಯನ್ನು ಹೋಗಲಾಡಿಸಲು ಗಮನಹರಿಸಬೇಕಾಗಿದೆ.
_ಶಂಕ್ರಣ್ಣ ವಣಿಕ್ಯಾಳಜಿಪಂ ಮಾಜಿ ಉಪಾಧ್ಯಕ್ಷ ಕಲಬುರಗಿ
ಪಿಯು, ಪದವಿ ಪರಿಸ್ಥಿತಿಯೂ ಇದಕ್ಕೆ ಬಿನ್ನವಿಲ್ಲ..! ; ಜಿಲ್ಲೆಯಲ್ಲಿ ಕೇವಲ ಪ್ರಾಥಮಿಕ, ಪೌಢ್ರ ಶಾಲೆಯಲ್ಲಿ ಮಾತ್ರ ಕೊರತೆಯಲ್ಲ,ಪಿಯು ಮತ್ತು ಪದವಿಯಲ್ಲಿಯೂ ಅಲ್ಲಲ್ಲಿ ಕೊರತೆಯಿದ್ದು, ವರ್ಗಾವಣೆ ಮತ್ತು ನಿವೃತ್ತಿಯಾಗಿರುವ ಸಂಖ್ಯೆಯಲ್ಲಿ ಏರಿಕೆ ಉಂಟಾಗಿದ್ದು, ಹೀಗಾಗಿ ಇವುಗಳಲ್ಲಿಯೂ ಸಹ ಬಹುತೇಕ ಅತಿಥಿ ಉಪನ್ಯಾಸಕರೇ ಗತಿಯಾಗಿದೆ. ಇಗಾದರೇ ಫಲಿತಾಂಶದಲ್ಲಿ ಬದಲಾವಣೆ ಬಯಸುವುದಾದರೂ ಹೇಗೆ ಎನ್ನುವ ಕುರಿತು ಜಿಲ್ಲೆಯ ಶೈಕ್ಷಣಿಕ ಮತ್ತು ಮಕ್ಕಳ ಭವಿಷ್ಯದ ಕುರಿತು ಚಿಂತೆ ಮಾಡುವ ಪ್ರಶ್ನೆ ಬಂದೊದಗಿದೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಮಾಹಿತಿ
ತಾಲೂಕು ಮಂಜೂರಾದ ಹುದ್ದೆ ಭರ್ತಿಯಾದ ಹುದ್ದೆ ಖಾಲಿಯಿರುವ ಹುದ್ದೆ ಅಂತರ್ ವಿಭಾಗಕ್ಕೆ ವರ್ಗಾವಣೆಯಾದವರು
ಶಹಾಪುರ ೧೭೮೯ ೧೧೧೫ ೬೭೪ ೧೪೬
ಸುರಪುರ ೨೦೯೭ ೧೭೮೯ ೩೦೮ ೧೪೨
ಯಾದಗಿರಿ ೧೭೪೦ ೮೫೮ ೮೮೨ ೧೫೬
ಒಟ್ಟು ೫೬೨೬ ೩೨೪೭ ೨೩೭೯ ೪೪೪
