ಉದಯವಾಹಿನಿ, ಕೋಲಾರ : ತಾಲೂಕಿನ ನರಸಾಪುರ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಕೊಡುವಂತೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ಕಮೀಷನರ್ ಹಾಗೂ ತಹಶೀಲ್ದಾರ್ ರವರಿಗೆ ನರಸಾಪುರ ಗ್ರಾಮ ಪಂಚಾಯಿತಿ ಸಮಿತಿಯವರು ಮನವಿ ಸಲ್ಲಿಸಿದರು.ನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಾಪುರ ಗ್ರಾಮದ ಸಮೀಪದಲ್ಲಿರುವ ಹಿಂದೂ ರುದ್ರಭೂಮಿಯೂ ಭರ್ತಿಯಾಗಿದ್ದು ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದ್ದು ಒಬ್ಬರ ಮೇಲೆ ಒಬ್ಬರನ್ನು ಶವ ಸಂಸ್ಕಾರ ಮಾಡುವ ಪರಿಸ್ಥಿತಿ ಬಂದಿದ್ದು ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ನರಸಾಪುರ ಗ್ರಾಮಕ್ಕೆ ಸ್ಮಶಾನ ಜಾಗವನ್ನು ಮಂಜೂರು ಮಾಡಿಕೊಡುವಂತೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ನರಸಾಪುರ ಗ್ರಾಮ ಪಂಚಾಯಿತಿಯ ಸಮೀತಿ ವತಿಯಿಂದ ಕೋಲಾರ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ಕಮೀಷನರ್ ಹಾಗೂ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಾವತಿ, ಸದಸ್ಯರಾದ ಕೆ ಇ ಬಿ ಚಂದ್ರು, ಎಸ್ ಮುನಿರಾಜು, ಗೋಪಿನಾಥ್ ಕೆ, ಹೇಮಾವತಿ, ಎನ್ ಎಂ ಕುಮಾರ್, ಅಮರಾವತಿ, ಪ್ರಭಾಕರ್, ಗಾಯಿತ್ರಿ,ತಬ್ಬಸುಮ್ ಖಾನಂ, ಚಂದ್ರಪ್ಪ ಹಾಗೂ ಇತರರು ಇದ್ದರು
