
ಇಲಿಯಾಸಪಟೇಲ್. ಬ
ಉದಯವಾಹಿನಿ, ಯಾದಗಿರಿ : ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಅಭಿವೃದ್ದಿಗೆ ಸಾವಿರಾರೂ ಕೋಟಿ ಅನುದಾನವನ್ನು ಯೋಜನೆಗಳ ಮುಖಾಂತರ ನೀಡುತ್ತದೆ, ರೈತ ದೇಶದ ಬೆನ್ನೇಲುಬು ಎಂದು ಬಾಷಣದಲ್ಲಿ ರಾಜಕೀಯ ನಾಯಕರು ಹೇಳುತ್ತಾರೆ.
ಆದರೆ ಯಾದಗೀರಿ ಜಿಲ್ಲೇಯ ಕೆಲವು ಬಾಗಗಳಲ್ಲಿ ಈ ಮಾತು ಅಕ್ಷರ ಸಹ ಸುಳ್ಳಾಗಿ ಪರಿಣಮೀಸಿದೆ. ಸಧ್ಯ ಮುಂಗಾರು ಹಂಗಾಮು ಮುಗಿಯುತ್ತಾ ಬಂದು ವರುಣ ಅವಕೃಪೆಗೆ ಬಿದ್ದು ಕಷ್ಟ ಅನುಭವಿಸುತ್ತಿರುವ ರೈತಾಪಿ ವರ್ಗ , ಇನ್ನೊಂದು ಕಡೆಯಲ್ಲಿ ಕೆಇಬಿಯ ಮೊಂಡುತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಹೌದು ಯಾದಗೀರಿ ಜಿಲ್ಲೇಯ ಹಾಗೂ ತಾಲ್ಲೂಕಿನ ಬಂಡೇರದೊಡ್ಡಿ ಗ್ರಾಮಕ್ಕೆ ಕಳೆದ ಒಂದು ವಾರದಿಂದ ಸರಿಯಾದ ಸಮಯಕ್ಕೆ ವಿದ್ಯುತ್ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದು, ಕೇಳಲು ಹೋದರೆ ಲೋಡ್ ಶೆಡ್ಡಿಂಗ್ ಹಾಗೂ ಲೈನ್ ಪಾರ್ಟ್ ಎಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ರೈತರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ರೈತರು ಕಳೆದ 15 ದಿನಗಳಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಲೈನ್ ಮ್ಯಾನ್ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾದ ಸ್ಪಂದನೆ ಇಲ್ಲ, ಒಣಬೇಸಾಯದ ರೈತರಿಗೆ ದಿನದ ಏಳು ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಿದ್ದು ಕಳೆದ ಒಂದು ವಾರದಿಂದ ಸರಿಯಾಗಿ ಒಂದೇ ಒಂದು ಗಂಟೆ ಕೂಡ ವಿದ್ಯುತ್ ನೀಡಿಲ್ಲ.
ಹಣದ ಆಸೆಗೆ ಬಿದ್ದು ಲೈನ್ ಮ್ಯಾನ್ ಗಳು ಎನ್ ಜಿ ಓ ಲೈನ್ ಕೂಡ ಹಳ್ಳದ ದಂಡೆಯಲ್ಲಿರುವ ಪಂಪ್ ಸೆಟ್ ಹೊಂದಿರುವ ರೈತರಿಗೆ ನೀಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ರೈತರ-ರೈತರ ಮದ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದು, ಒಂದು ಮೂಗಿಗೆ ಬೆಣ್ಣೆ ಒಂದು ಮೂಗಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಈ ಬಾರಿ ಮಳೆ ಹಿನ್ನಡೆಯಾದ ಕಾರಣದಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ, ಹತ್ತಿ, ಮೆಣಸಿನಕಾಯಿ,ಶೇಂಗಾ ಮತ್ತು ತೊಗರಿ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿದ್ದು
ಅಧಿಕಾರಿಗಳು ಸರಿಯಾಗಿ ವಿದ್ಯುತ್ ನೀಡದೇ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
– ಯಾದಗಿರಿ ಜಿಲ್ಲೆಯಲ್ಲಿ ಅನೇಕ ಭಾಗಗಳಲ್ಲಿ ಮುಂಗಾರು ಹಂಗಾಮು ಕೈ ಕೊಟ್ಟಿದ್ದರಿಂದ, ರೈತರು ಬೊರವೇಲ್ ಗಳನ್ನೇ ನಂಬಿ ಕುಳಿತುಕೊಂಡಿದ್ದರಿಂದ ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ಭಾಗದ ರೈತರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಮಳೆಯಾಗುತ್ತದೆ ಎಂದು ಕುಳಿತ್ತಿದ್ದ ರೈತರಿಗೆ ಮಳೆಯಾಗದ ಹಿನ್ನಲೆಯಲ್ಲಿ ವಿದ್ಯುತ್ತನ್ನು ಸರಿಯಾಗಿ ನೀಡಿದ್ದರೆ ನಮಗೆ ಅನುಕೂಲವಾಗುತ್ತಿತ್ತು, ಕೆಇಬಿ ಅಧಿಕಾರಿಗಳ ಆಲಸ್ಯತನಕ್ಕೆ ರೈತರ ಬದುಕು ಬಿದಿಗೆ ಬಂದಂತಾಗಿದೆ.
“ಹಲವಾರು ವರ್ಷಗಳಿಂದ ಬಂಡೇರದೊಡ್ಡಿ ಹಾಗೂ ಗುರಿಕಾರದೊಡ್ಡಿ ಗ್ರಾಮಗಳಿಗೆ ಸರಿಯಾದ ವಿದ್ಯುತ್ ಸಂಪರ್ಕವಿಲ್ಲ, ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದ್ದರು ಕೊಡ್ ಯಾವುದೇ ಕ್ಯಾರೇ ಅನ್ನುತ್ತಿಲ್ಲ, ರೈತರ ಯಾವುದೇ ಸಲಹೆ ಸೂಚನೆಯಿಲ್ಲದೆ ಕಾಲುವೆ ನೀರು ವಾರಬಂದಿ ಮಾಡಿದ್ದಾರೆ. ಮೊದಲೇ ಸರಿಯಾಗಿ ಮಳೆಯಿಲ್ಲ, ವಿದ್ಯುತ್ ಕೊಡ್ ಸರಿಯಾಗಿ ಇಲ್ಲವೆಂದರೆ ರೈತರ ಗೋಳು ಕೇಳುವರು
ಯಾ
ರು ಎಂಬಂತಾಗಿದೆ. ಈಗಲಾದರೂ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಅಳವಡಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಬೇಕಾಗುತ್ತದೆ”
_ಮಹಾದೇವಿ. ಎಸ್. ಬೇನಾಳಮಠ(ರೈತ ಸಂಘದ ರಾಜ್ಯ ಉಪಾಧ್ಯಕ್ಷರು)
