ಉದಯವಾಹಿನಿ, ಚಿಂಚೋಳಿ : ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ 26 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 39 ಸಹಾಯಕಿಯರ ತಾತ್ಕಾಲಿಕ ಮತ್ತು ಗೌರವಧನ ಆಧಾರಿತವಾಗಿರುವ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು ಆಯ್ಕೆ ಸಮಿತಿಯು ಅನುಮೋದನೆ ಮೇರೆಗೆ ತಾತ್ಕಾಲಿಕ ಆಯ್ಕೆ ಮಾಡಲಾಗಿದ್ದು ಆಕ್ಷೇಪಣೆಗಳೆನ್ನಾದರು ಇದ್ದಲ್ಲಿ ಅ.24ರಿಂದ ಸೆ.01ರವರೆಗೆ ಕಛೇರಿಗೆ ಆಗಮಿಸಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ ಕವಿತಾಳ ತಿಳಿಸಿದ್ದಾರೆ.ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ಈಗಾಗಲೇ ಆದೇಶದಂತೆ 26ಅಂಗನವಾಡಿ ಕಾರ್ಯಕರ್ತೆಯರು ಹಾಗೂ 39ಸಹಾಯಕಿಯರು ತಾತ್ಕಾಲಿಕ ಆಯ್ಕೆಮಾಡಿ ಅ.24ರಂದ್ದು ಕಛೇರಿ ಫಲಕದಲ್ಲಿ ಪ್ರಕಟಿಸಲಾಗಿದೆ,ಆಕ್ಷೇಪಣೆ ಇದ್ದಲ್ಲಿ ಅ.24ರಿಂದ ಸೆ.01ರವರೆಗೆ ಸಾಯಂಕಾಲ 5.30ಗಂಟೆಯ ಒಳಗೆ ಕಛೇರಿಗೆ ಸಂಬಂಧಪಟ್ಟ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಕಛೇರಿಗೆ ಆಗಮಿಸಿ ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
