ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಚನಾವಣೆಯಲ್ಲಿ ಮತದಾರರ ಹಾಗೂ ಮುಖಂಡರ ಒಮ್ಮತದ ಅಭಿಪ್ರಾಯ ಪಡೆದು ಕಾಂಗ್ರೆಸ್ ಪಕ್ಷದ ಬೆಂಬಲಿತ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸುಭಾಷ್ ರಾಠೋಡ್ ಹೇಳಿದರು. ಪಟ್ಟಣದ ಚಂದಾಪೂರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪಿಎಲ್ ಡಿ ಬ್ಯಾಂಕಿನ ಚುನಾವಣೆ ಕುರಿತು ಹಮ್ಮಿಕೊಂಡಿದ್ದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು,ಪಿಎಲ್ ಡಿ ಬ್ಯಾಂಕಿನ ವ್ಯಾಪ್ತಿಯಲ್ಲಿ ಒಟ್ಟಾರೆ 14ಕ್ಷೇತ್ರಗಳುವಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು.
ಪ್ರತಿಯೊಂದು ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಜನ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರ ಚುನಾವಣಾ ಉಸ್ತುವಾರಿ ನೇಮಿಸಲಾಗುವುದು ಅದರಂತೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ನೀಡಲಾಗುವುದು,ಒಟ್ಟಾರೆ 14ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 8ರಿಂದ09 ಅಭ್ಯರ್ಥಿಗಳು ಗೆಲ್ಲಲಿವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಿ,ಬಾಬುರಾವ ಪಾಟೀಲ,ಮಧುಸೋದನರೆಡ್ಡಿ,ಜಗನ್ನಾಥ ಇದಲಾಯಿ,ಜಗನ್ನಾಥ ಗುತ್ತೇದಾರ,ಅಬ್ದುಲ್ ಬಾಷೀದ್,ಮಹೇಮೂದ ಪಟೇಲ,ಸೈಯದ್ ಶಬ್ಬೀರ,ಲಕ್ಷ್ಮಣ ಆವುಂಟಿ,ಪ್ರಭುಲಿಂಗ ಲೇವಡಿ,ಶರಣುಪಾಟೀಲ ಮೋತಕಪಳ್ಳಿ,ಸಂತೋಷ ಗುತ್ತೇದಾರ,ಮಂಜುನಾಥ ಲೇವಡಿ,ರೇವಣಸಿದ್ದಪ್ಪ ಅಣಕಲ್,ರಾಮಶೇಟ್ಟಿ ಪವ್ಹಾರ,ತುಕ್ಕಾರಾಮ ಪವ್ಹಾರ,ಖಲೀಲ್ ಪಟೇಲ,ಮೇಘರಾಜ ರಾಠೋಡ್,ರೇವಣಸಿದ್ದಪ್ಪ ಪೂಜಾರಿ,ಸೈಯದ್ ಜಾಕೀರ,ಅನೇಕರಿದ್ದರು.
