ಉದಯವಾಹಿನಿ, ದೇವದುರ್ಗ : ಕಲ್ಯಾಣ ಕರ್ನಾಟಕದ ಗಡಿ ಭಾಗದಲ್ಲಿ
ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜಿಲ್ಲಿ ನಮ್ಮ ರಾಯಚೂರಿನಲ್ಲಿ
ಅಖಿಲ ಭಾರತ ವಿಜ್ಞಾನಗಳ ವೈದಿಕ (ಏಮ್ಸ್) ಸಂಸ್ಥೆಯನ್ನು ಸ್ಥಾಪನೆಗೆ
ಒತ್ತಾಯಿಸಿ ಏಮ್ಸ್ ಜಿಲ್ಲಾ ಹೋರಾಟ ಸಮಿತಿಯು ಕಳೆದ 40 ನೇ
ದಿನಗಳಿಂದ ಧರಣಿ ನಡೆಯುತ್ತಿದ್ದು ಅಲ್ಲದೇ ನಮ್ಮ ರಾಜ್ಯ ಸರ್ಕಾರವು
ಕೂಡ ಕೇಂದ್ರದ ಅನುಮೋದನೆಯ ಆದೇಶ ಕೋರಿ ಪತ್ರ ಬರೆದಿದ್ದು
ಅಲ್ಲದೆ ಜಿಲ್ಲೆಯ ಸರ್ವಪಕ್ಷದ ಶಾಸಕರ ನಿಯೋಗವು ಕೇಂದ್ರದ
ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಸ್ಥಿತಿ ಗತಿ ಬಗ್ಗೆ ಮನವರಿಕೆ
ಮಾಡಿ ಜಿಲ್ಲೆಗೆ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದು ಹಾಗಾಗಿ ನಮ್ಮ
ಜಿಲ್ಲೆಯ ಬಹುದಿನಗಳ ಬೇಡಿಕೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳು
ಕೂಡಲೇ ಸ್ಪಂದಿಸಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ
ಕಾನೂನಾತ್ಮಕ ಅನುಮೋದನೆಗೆ (ಮಂಜೂರಾತಿಗೆ ಗೆಜೆಟ್) ಅವಕಾಶ
ಮಾಡಿಕೊಡಬೇಕೆಂದು ತಾಲೂಕು ಏಕಲ ಚೇತನರ ಸಂಘಟನೆಯಿಂದ
ಪ್ರತಿಭಟನೆ ಮಾಡಿ ಘೋಷಣೆ ಕೂಗಿ ಉಪ-ತಹೀಸೀಲ್ದಾರ ವೆಂಕಟೇಶ
ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು,
ಈ ಸಂದರ್ಭದಲ್ಲಿ ವಿಕಲ ಚೇತನರ ತಾಲೂಕು ಸಮಿತಿಯ ಅಧ್ಯಕ್ಷ
ವೆಂಕೋಬ ನಾಯಕ ದೊಂಡಂಬಳ ಸಮಿತಿ ರು
ಮಾಜಿ ಅಧ್ಯಕ್ಷ ಕಾರ್ಯದರ್ಶಿ ಚಂದ್ರು ಚಿಂಚೋಡಿ, ಖಜಾಂಚಿ
ಹನುಮಂತಿ ಕರ್ಕಿಹಳ್ಳಿ. ಲೋಕಪ್ಪ ಜಾದವ್, ರಂಗಪ ಗೋಪ್ತಾಪುರ್,
ವಿರುಪಾಕ್ಷಿ ಎಚ್ ಡಿ , ತಿಮ್ಮಣ್ಣ ಹೇಮನಾಳ, ದರೋಜಿ ಹಾಗೂ
ಸಂಘದ ಇತರ ಸದಸ್ಯರು ಹಾಗೂ ಕಸಾಪ ತಾಲೂಕು ಅಧ್ಯಕ್ಷ ಎಚ್
ಶಿವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
