ಉದಯವಾಹಿನಿ, ದೇವರಹಿಪ್ಪರಗಿ: ಇಸ್ರೋ ವಿಜ್ಞಾನಿಗಳ ನಿರಂತರವಾದ ಪ್ರಯತ್ನದ ಪ್ರತಿಫಲವಾಗಿ ಚಂದ್ರಯಾನ-3 ಯೋಜನೆಯು ಯಶಸ್ವಿಯಾಗಿದ್ದು ಇದರಿಂದ ಇಸ್ರೋ ವಿಜ್ಞಾನಿಗಳ ಕಾರ್ಯ ಜಗ ಮೆಚ್ಚುಗೆಯಾಗಿದೆ,ಇಸ್ರೋ ವಿಜ್ಞಾನಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವ ಎ. ಎಚ್. ವಾಲೀಕಾರ ಹೇಳಿದರು.  ಪಟ್ಟಣದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಾಯಂಕಾಲ ಚಂದ್ರಯಾನ ಯೋಜನೆಯ ಯಶಸ್ವಿಯ ಕುರಿತು ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಣ ಸಂಯೋಜಕರಾದ ಪಿ. ಎಸ್. ಮಿಂಚನಾಳ ಹಾಗೂ ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷರಾದ ಸಂಗನಗೌಡ. ಎಸ್. ಬಿರಾದಾರ ಅವರು ಮಾತನಾಡುತ್ತಾ ಮರಳಿ ಯತ್ನವ ಮಾಡು ಎನ್ನುವಂತೆ ಸಾಧಿಸಬೇಕೆಂಬ ದಿವ್ಯ ಸಂಕಲ್ಪವನ್ನು ತೊಟ್ಟು ಇದುವರೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾವ ದೇಶವೂ ಕೂಡಾ ಮಾಡಿರದ ಸಾಧನೆಯನ್ನು ಭಾರತ ದೇಶವು ಮಾಡಿದ್ದು ಭಾರತವು ವಿಶ್ವಗುರುವಾಗ ಕಾಲವು ಸನ್ನಿಹಿತವಾಗಿದೆ ಎಂದರು.ವಿಜಯೋತ್ಸವದ ಪ್ರತೀಕವಾಗಿ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಪಟಾಕಿ ಸಿಡಿಸುವದರ ಜೊತೆಗೆ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಮಹಾಂತೇಶ ವಂದಾಲ ,ಪಿ. ಸಿ. ತಳಕೇರಿ,ಎಮ್‌. ಎಚ್. ಪಟೇಲ,ಇಜೇರಿ ಸರ್,ಗೊಲ್ಲಾಳ ಬಿರಾದಾರ,ಎನ್. ಎಸ್. ಹಿರೇಮಠ, ನಾಗೇಶ ಹರವಾಳ,ಸುರೇಶ ಬೀರನಗಡ್ಡಿ,ವಿಜಯಕುಮಾರ ತಳವಾರ,ಮಲಕು ಸುರಗಿಹಳ್ಳಿ, ವಾಯ್. ಜಿ. ತಾವರಖೇಡ,ಶಾಂತಯ್ಯ ಮಠಪತಿ,ಆರ್. ಎಮ್. ಕುಲಕರ್ಣಿ,ಗವಳಿ ಸರ್,ಚನ್ನು ಹದರಿ,ದಾವುಲಸಾಬ ಗಂಗೂರ,ಜಿ. ಪಿ. ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!