
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ಉದಯವಾಹಿನಿ, ಶಿಡ್ಲಘಟ್ಟ: ತಾಲೂಕಿನ ಪಲ್ಲಿಚೇರ್ಲು ಗ್ರಾಮ ಪಂಚಾಯಿತಿಯ ಬೈರಗಾನಹಳ್ಳಿ ಗ್ರಾಮದ ಓರ್ವ ವ್ಯಕ್ತಿಯನ್ನು ಕತ್ತು ಸೀಳಿ
ಹತ್ತೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶಿಡ್ಲಘಟ್ಟ ತಾಲೂಕಿನ ಹೋಬಳಿಯ ಪಲ್ಲಿಚೇರ್ಲು ಗ್ರಾಮ ಪಂಚಾಯಿತಿಯ ಬೈರಗಾನಹಳ್ಳಿ ಗ್ರಾಮದ ರಾಜಕೀಯ ಮುಖಂಡ ನಾರಾಯಣಸ್ವಾಮಿ (48) ಅಲಿಯಾಸ್ ಕರಿಯಪ್ಪ ಹತ್ಯೆಯಾದ ದುರ್ದೈವಿ ಎಂದು ತಿಳಿಯಲಾಗಿದೆ. ಶಿಡ್ಲಘಟ್ಟದಿಂದ ಬೈರಗಾನಹಳ್ಳಿ ಗ್ರಾಮಕ್ಕೆ ಓಮಿನಿ ಕಾರಿನಲ್ಲಿ ಗುರುವಾರ ರಾತ್ರಿ 8 ಗಂಟೆ ಆಸುಪಾಸಿನಲ್ಲಿ ಮನೆಗೆ ಬರುತ್ತಿರುವಾಗ ಮಾರ್ಗ ಮಧ್ಯೆ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ.
ಮೃತ ದುರ್ದೈವಿಗೆ ಇಬ್ಬರು ಪತ್ನಿಯರು ಹಾಗೂ ನಾಲ್ಕು ಜನ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಾಜೇಶ್ವರಿ ಬೇಟಿ ನೀಡಿ ಪರಿಶೀಲಿಸಿ ಪ್ರರಣ ದಾಖಲಿಸಿಕೊಂಡಿದ್ದಾರೆ.
