
ಉದಯವಾಹನಿ, ಸಿಂಧನೂರು : ತಾಲ್ಲೂಕು ತಹಶಿಲ್ದಾರ್ ಕಛೇರಿ ಮುಂದೆ ಕರ್ನಾಟಕ ರೈತ ಸಂಘ KRS /AIKKS ತಾಲೂಕು ಸಮಿತಿ ವತಿಯಿಂದ ಭೂ ಮಂಜೂರಾತಿ ಗಾಗಿ ಒತ್ತಾಯಿಸಿ ಧರಣಿ ನಡೆಸಲಾಯಿತು.ಈ ಧರಣಿ ಕುರಿತು ಮಾತನಾಡಿದ ಆರ್ ಮಾನಸಯ್ಯ ಅವರು ಸಿಂಧನೂರು ತಾಲ್ಲೂಕು ಗ್ರಾಮದ ಸ.ನಂ.419/ಪಿ1 ವಿಸ್ತೀರ್ಣ 32 ಎಕರೆ 11ಗುಂಟೆ.
ಸುಲ್ತಾನಪುರ ಗ್ರಾಮದ ಸ.ನಂ.186.29 ಎಕರೆ 31 ಗುಂಟೆ ಒಟ್ಟು ಭೂ 62 ಎಕರೆ ಭೂ ಯನ್ನು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಕಬ್ಜ ಮಾಡಿದ್ದು ಧಿಕ್ಕರಿಸಿ ಕಾನೂನು ಹೋರಾಟವೇ ಅನಿವಾರ್ಯ ಎಂದು ತಿಳಿಸಿದರು. ನಮ್ಮ ಪಾಲಿನ ಹೆಚ್ಚುವರಿ ಭೂಮಿಯನ್ನು ನಾವು ಸಾಗುವಳಿ ಮಾಡಲಿಕ್ಕೆ ಹೋದಾಗ ರಾಜಶೇಖರ ನಾಡಗೌಡ ಚಂದ್ರ ಭೂಪಾಲ್ ನಾಡಗೌಡ ಭೂ ಮಾಲೀಕರು 30 ರಿಂದ 40 ಜನರನ್ನು ಕರೆದುಕೊಂಡು ಬಂದಿದ್ದು ಅವರು ಯಾರು…?? ಮಾಡಿದರುಮತ್ತು ನಗರದ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಸುಮಾರು 10-15
ಕಾರುಗಳನ್ನು ತೆಗೆದುಕೊಂಡು ಬಂದಿದ್ದು ಯಾರು..? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರುಏನು ನಾಡಗೌಡರೇ ಗುಂಡಾಗಿರಿ ಮಾಡಿ ಭೂಮಿಯನ್ನು ಉಳಿಸಿ ಕೊಳ್ಳುವುದಕ್ಕೆ ಗುಂಡಾಗಳನ್ನು ಛೂ.. ಬಿಟ್ಟಿದ್ದೀರಾ ಇದಕ್ಕೆಲ್ಲ ನಾವು ಹೆದರುವುದಿಲ್ಲ ಮಾಜಿ ಮಂತ್ರಿಗಳೇ ಎಂದು ತಿರುಗೇಟು ನೀಡಿದರು. ನಾಡಗೌಡ ಒಂದು ಮಾತು ಹೇಳುತ್ತೇನೆ ಕೇಳಿ..! ಈ ನಮ್ಮ ಕಾಲಿನಲ್ಲಿ ಚಲ ಚಪ್ಪಲಿ ಮತ್ತು 2 ಸಾವಿರ ರೂ ಬೂಟು ಹಾಗೂ ಚಲವೂ ಅಂಗಿ ಹಾಕ್ಕೊಳ್ತವೆಂದರೆ ನಾವು ದುಡಿದ ಸಂಪಾದನೆ ಮಾಡಿದ್ದು.. ನಿಮ್ಮ ತರ ನಾವು ಕಳ್ಳತನ ಮಾಡಿ ಭೂಮಿ ಸಂಪಾದನೆ ಮಾಡಿಲ್ಲ ಎಂದು ಮಾಜಿ ಮಂತ್ರಿ ವೆಂಕಟರಾವ್ ನಾಡಗೌಡ ಅವರಿಗೆ
ಆರ್ ಮಾನಸಯ್ಯ ಟಾಂಗ್ ಕೊಟ್ಟರು. ಆಕಾಲದಲ್ಲಿ ಸುಮಾರು 30-40 ವರ್ಷಗಳಿಂದ ಭೂಮಿ ಹೋರಾಟದಲ್ಲಿ ಭೂ ಮಾಲೀಕರು ನಮ್ಮನ್ನು ಒಂದು ಕೂದಲು ಸಹ ಕಿತ್ತಿಕೊಳ್ಳುವುದಕ್ಕೆ ಆಗಲಿಲ್ಲ ನಾಡಗೌಡರೇ ಅದು ನಿಮಗೆ ನೆನಪಿರಲಿ ಎಂದು ಹೇಳಿದರು . 1984-86 ಆ ಕಾಲಲ್ಲಿ ನಿಮ್ಮ ಮೆದಿಕಿನಾಳ ಸಂಬಂಧಿಕರ ವಿರುದ್ದ ಬರಿಗೈನಲ್ಲಿ 3 ವರ್ಷ ಹೋರಾಟ ಮಾಡಿ ಗೆದ್ದು ಭೂಮಿ ಹಂಚಿದ್ದು ನಮ್ಮ ಚರಿತ್ರೆ ಆದರೆ ಕಳ್ಳತನ ಮಾಡಿ ಭೂಮಿ ಸಂಪಾದನೆ ಮಾಡಿದ್ದು ನಿಮ್ಮ ಚರಿತ್ರೆ ಎಂದರ. ನಾಡಗೌಡರೇ ಎಷ್ಟು ಗುಂಡಾ ಗಳನ್ನು ಕರಿಸುತ್ತೀರಿ ಕರೆಸಿ ನಾವು ಎಲ್ಲಾ ಗೂಂಡಾಗಳನ್ನು ಮತ್ತು ಪುಡಿ ರೌಡಿಗಳನ್ನು ನೋಡಿದ್ದೇವೆ. ಆದರೆ ನೀವು ಕುಡಿಸಿ ಕರೆದುಕೊಂಡು ಬಂದಿದ್ದು ನಿಶಾ ಇರೋವರಿಗೆ ಮಾತ್ರ ಮಾತನಾಡುತ್ತಾರೆ ನಿಶಾ ಇಳಿದು ಮೇಲೆ ಕರೆನ್ಸಿ ಇಲ್ಲದ ಮೊಬೈಲ್ ನ ತರ ಸ್ವಿಚ್ ಆಫ್ ಅಗುತ್ತಾರೆಇದು ಕಾನೂನಿನ ಹೋರಾಟ ಧರ್ಮದ ಹೋರಾಟ ನ್ಯಾಯದ ಹೋರಾಟ ಈ ನಾಡಿನಲ್ಲಿ ಯಾರು ಭೂಮಿ ಸಾಗುವಳಿ ಮಾಡುತ್ತಾರೂ ಅವರಿಗೆ ಭೂಮಿ ಸಿಗಬೇಕು ಎಂದು ಆಗ್ರಹಿಸಿ ತಾಲ್ಲೂಕು ತಹಶೀಲ್ದಾರ್ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಂ ಗಂಗಾಧರ್ ಮಲ್ಲಯ್ಯ ಕಟ್ಟಿಮನಿ. ಮಲ್ಲಪ್ಪ ಗೋನಾಳ.ಸಂತೋಷ ಮಾಬುಸಾಬ ಬೆಳ್ಳಟ್ಟಿ ಹನುಮಂತಪ್ಪ ಗುಡಿಹಾಳ ಅಜೀಜ್ ಜಾಗೀರದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು
