ಉದಯವಾಹಿನಿ, ನವದಹೆಲಿ: 69ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಗಂಗೂಬಾಯ್ ಕಥಾಡವಾಡಿಯ ಚಿತ್ರದ ನಟನೆಗಾಗಿ ಆಲಿಯಾ ಭಟ್ ಹಾಗು ಮಿಮಿ ಚಿತ್ರಕ್ಕಾಗಿ ಕೃತಿ ಸನೂನ್ ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ತೆಲುಗಿನ ಪುಷ್ಪ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಅತ್ಯುತ್ತಮ ನಟಿ, ಮತ್ತು ನಟ ಪ್ರಶಸ್ತಿ ಪಡೆದಿರುವ ಮೂರು ಮಂದಿ ಕಲಾವಿದರಿಗೂ ಮೊದಲ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಆರ್‍ಆರ್‍ಆರ್’ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ಸಂಪೂರ್ಣ ಮನರಂಜನೆಯನ್ನು ಒದಗಿಸುವ ಪ್ರಶಸ್ತಿ ಗೆದ್ದಿದೆ ಎಂದು ಜ್ಯೂರಿ ಅಧ್ಯಕ್ಷ ನಿರ್ದೇಶಕ ಕೇತನ್ ಮೆಹ್ತಾ ದೆಹಲಿಯಲ್ಲಿಂದು ಪ್ರಕಟಿಸಿದ್ದಾರೆ
‘ಇರವಿನ್ ನಿಜ’ ಚಿತ್ರದ ‘ಮಾಯವ ಚಾಯವ’ ಹಾಡಿಗೆ ಶ್ರೇಯಾ ಘೋಷಾಲ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ‘ಆರ್ ಆರ್ ಆರ್ ಚಿತ್ರದ ‘ಕೊಮುರಂ ಭೀಮುಡೋ’ ಹಾಡಿಗೆ ಕಾಲ ಭೈರವ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
